ಪುರಾಣ ವಾಚನ – ಪ್ರವಚನದಿಂದ ಅಂತರಂಗ ಮತ್ತು ಬಹಿರಂಗ ಸೌಂದರ್ಯ ವರ್ಧನೆ

9:13 PM, Monday, July 17th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Banariಉಜಿರೆ: ಜನಸಾಮಾನ್ಯರಿಗೆ ಕಾವ್ಯದ ಅರ್ಥ, ಭಾವ ಮತ್ತು ಧ್ವನಿ ಪ್ರಪಂಚದ ಸೊಗಡನ್ನು ತಿಳೀಯುವಂತೆ ಸರಳವಾಗಿ ವ್ಯಾಖ್ಯಾನಿಸುವುದೇ ಪುರಾಣ ವಾಚನ – ಪ್ರವಚನದ ಉದ್ದೇಶವಾಗಿದೆ. ಪುರಾಣ ವಾಚನ – ಪ್ರವಚನದಿಂದ ಅಂತರಂಗ ಮತ್ತು ಬಹಿರಂಗ ಸೌಂದರ್ಯ ವರ್ಧನೆಯಾಗುತ್ತದೆ ಎಂದು ಮಂಜೇಶ್ವರದ ಡಾ. ರಮಾನಂದ ಬನಾರಿ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ಎರಡು ತಿಂಗಳ ಕಾಲ ನಡೆಯುವ ಕರ್ನಾಟಕ ಭಾಗವತ ವಾಚನ – ಪ್ರವಚನ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಕಾವ್ಯ ವಾಚನ ಬಳಕೆಯಲ್ಲಿತ್ತು. ವ್ಯಾಖ್ಯಾನಕಾರರಿಗೆ ಸ್ವಸ್ಥಾನ ಪ್ರಜ್ಞೆ ಮತ್ತು ಔಚಿತ್ಯ ಪ್ರಜ್ಞೆ ಸದಾ ಇರಬೇಕು ಎಂದು ಅವರಿ ಕಿವಿಮಾತು ಹೇಳಿದರು. ಸಹೃದಯ ಶ್ರೋತೃಗಳಿಗೆ ಸರಳವಾಗಿ ವಿಷಯವನ್ನು ಮನದಟ್ಟು ಮಾಡುವುದೇ ವಾಚನ – ಪ್ರವಚನದ ಉದ್ದೇಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮನೋರಂಜನೆಯೊಂದಿಗೆ ಉತ್ತಮ ಸಂಸ್ಕಾರ ಕೊಡುವ ಕಾರ್ಯ ಮಾಡಬೇಕು. ಪುರಾಣ ಗ್ರಂಥಗಳನ್ನು ವಿದ್ಯಾರ್ಥಿಗಳು ಕುತೂಹಲ ಮತ್ತು ಆಸಕ್ತಿಯಿಂದ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ದೇವರ ದರ್ಶನ ಮಾತ್ರ ತೀರ್ಥಕ್ಷೇತ್ರಗಳಿಗೆ ಹೋಗವ ಉದ್ದೇಶವಾಗಬಾರದು. ಭಕ್ತರು ಅಲ್ಲಿ ಆಸಕ್ತಿಯ ವಿಷಯಗಳನ್ನು ಸಂಗ್ರಹಿಸಿ ಮನಸ್ಸನ್ನೂ ಪಕ್ವ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಡಾ. ರಮಾನಂದ ಬನಾರಿ ಅವರನ್ನು ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು.

ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಉಜಿರೆ ಅಶೋಕ್ ಭಟ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ದಿವಾಕರ ಆಚಾರ್ಯ ಮತ್ತು ಉಜಿರೆ ಅಶೋಕ್ ಭಟ್ ವಾಚನ – ಪ್ರವಚನ ನಡೆಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English