ಅಪ್ರಾಪ್ತ ಬಾಲಕನ ಮೇಲೆ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್‌ನಿಂದ ಲೈಂಗಿಕ ದೌರ್ಜನ್ಯ

2:27 PM, Thursday, July 20th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Securityಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕನಿಗೆ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಗೋಳ್ತಮಜಲಿನ ಸೀತಾರಾಮ ಶೆಟ್ಟಿ (35) ಬಂಧಿತ ಆರೋಪಿ. ಸುರತ್ಕಲ್‌ ಕೃಷ್ಣಾಪುರ ಮೂಲದ ಮಹಿಳೆಯೋರ್ವರು ಅಪಘಾತಕ್ಕೊಳಗಾಗಿ ಕಳೆದ 5-6 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರನ್ನು ನೋಡಿಕೊಳ್ಳಲು ಮಂಗಳವಾರ ಅವರ ಅಪ್ರಾಪ್ತ ವಯಸ್ಕ ಪುತ್ರ ಆಸ್ಪತ್ರೆಗೆ ಬಂದಿದ್ದ. ರಾತ್ರಿ ವೇಳೆ ಆತನಿಗೆ ಮಲಗಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇಲ್ಲದಿದ್ದ ಕಾರಣ ಆತನ ಸ್ಥಿತಿ ಗಮನಿಸಿದ ಆರೋಪಿ ಆತನಿಗೆ ಆಸ್ಪತ್ರೆಯ ಬೆಡ್‌ಶೀಟ್‌ಗಳನ್ನಿಡುವ ಗೋಡೌನ್‌ವೊಂದರಲ್ಲಿ ಮಲಗಲು ವ್ಯವಸ್ಥೆ ಇರುವುದಾಗಿ ತಿಳಿಸಿ ಆ ಕೊಠಡಿಗೆ ಆತನನ್ನು ಕಳುಹಿಸಿಕೊಟ್ಟಿದ್ದ.

ಸ್ವಲ್ಪ ಸಮಯದ ನಂತರ ಆರೋಪಿ ಕೂಡಾ ಗೋಡೌನ್‌ಗೆ ತೆರಳಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ನೊಂದ ಬಾಲಕ ಇತರರಲ್ಲಿ ವಿಷಯವನ್ನು ತಿಳಿಸಿದ್ದು, ಇದರಿಂದ ಪ್ರಕರಣ ಬೆಳಕಿಗೆ ಬಂದಿತು. ಆರೋಪಿ ಸೆಕ್ಯೂರಿಟಿ ಗಾರ್ಡ್‌ ಮಂಗಳವಾರ ಸಂಜೆಯವರೆಗೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಬಾಲಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಪೋಸ್ಕೋ ಕಾಯ್ದೆಯಡಿ ಸೆಕ್ಯೂರಿಟಿ ಗಾರ್ಡ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English