- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

‘ಮಾರ್ಚ್ 22’ ಸಿನೆಮಾದ ಧ್ವನಿಸುರುಳಿ (ಆಡಿಯೋ) ಬಿಡುಗಡೆ

March_22 [1]ಮಂಗಳೂರು : ಆಕ್ಮೆ ( ACME)ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹು ನಿರೀಕ್ಷಿತ ‘ಮಾರ್ಚ್ 22’ ಸಿನೆಮಾದ ಧ್ವನಿಸುರುಳಿ (ಆಡಿಯೋ) ಬಿಡುಗಡೆ ಸಮಾರಂಭ ಗುರುವಾರ ನಗರದ ಪಂಪ್ವೆಲ್’ನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಇದೆ ಸಂದರ್ಭದಲ್ಲಿ ಸಿನೆಮಾದ ಹಾಡುಗಳ ಟೀಸರ್’ನ್ನು ಬಹುಭಾಷ ನಟ ಆಶಿಶ್ ವಿದ್ಯಾರ್ಥಿ ಬಿಡುಗಡೆಗೊಳಿಸಿದರು. `ನನಗೆ ಕನ್ನಡ ಬರುವುದಿಲ್ಲ. ಆದರೆ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದೇನೆ. ಜನರು ನನ್ನ ಅಭಿನಯ ಮೆಚ್ಚಿಕೊಂಡಿದ್ದಾರೆ. ಮಾರ್ಚ್ 22 ಚಿತ್ರದಲ್ಲಿ ನನ್ನ ಪಾತ್ರ ಖುಷಿಕೊಟ್ಟಿದೆ. ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನಾನು ಚಿರ‌ಋಣಿ. ಈ ಚಿತ್ರ ಕನ್ನಡ ಭಾಷೆಯಲ್ಲಿ ಒಳ್ಳೆಯ ಹೆಸರು ತರಲಿದೆ. ಕನ್ನಡಿಗರ ಪ್ರೀತಿ-ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೇನೆ’ ಆಶಿಷ್ ವಿದ್ಯಾರ್ಥಿ ಮೆಚ್ಚುಗೆಯ ನುಡಿಗಳನ್ನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರು ಚಿತ್ರಕ್ಕೆ ಶುಭಾಕೋರಿದರು. ಪ್ರತಿಯೊಬ್ಬರ ಮನಮುಟ್ಟುವ ಹಾಗೂ ಮನತಟ್ಟುವಂತ ಇಂತಹ ಅದ್ಭುತವಾದ ಚಿತ್ರವನ್ನು ಕೊಡುಗೆಯಾಗಿ ನೀಡಿದ ಹರೀಶ್ ಶೇರಿಗಾರ್ ಹಾಗೂ ಅವರ ಕುಟುಂಬದವರಿಗೂ ಶುಭಾ ಹಾರೈಸುವುದಾಗಿ ಅವರು ಹೇಳಿದರು.

ಆಕ್ಮೆ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಮಾಲ್ಹಕ, ಚಿತ್ರದ ನಿರ್ಮಾಕ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸರ್ವಧರ್ಮವನ್ನು ಪ್ರೀತಿಸುವ ಜಾತ್ಯಾತೀತ ದೇಶ ನಮ್ಮದು. ಯಾವೂದೇ ಜಾತಿ ಭೇದವಿಲ್ಲದ ಇಲ್ಲಿಯ ಒಗ್ಗಟ್ಟು ಸಹೋದರತ್ವ ಭಾವನೆಯಿಂದ ನಮ್ಮ ಜಿಲ್ಲೆ ಹೊರದೇಶಗಳಲ್ಲೂ ಕೀರ್ತಿಗಳಿಸಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವೊಂದು ಕಡೆ ಕೆಲವೇ ಕೆಲವು ಸಮಾಜ ವಿರೋಧಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಕಿಡಿಗೇಡಿಗಳ ಈ ವರ್ತನೆಯಿಂದ ದೇಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾನು ಈ ಚಿತ್ರವನ್ನು ನಿರ್ಮಿಸಿದ್ದೇನೆ. ಮಾತ್ರವಲ್ಲದೇ ನಮ್ಮ ಸಮಾಜದ ಒಳಿತಿಗಾಗಿ ಈ ಚಿತ್ರದ ಮೂಲಕ ನಮ್ಮ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತಿದ್ದೇವೆ.ಜೊತೆಗೆ ನೀರಿನ ಮಹತ್ವದ ಬಗ್ಗೆ ಈ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಬಿಂಬಿಸಲಾಗಿದೆ ಎಂದು ಹರೀಶ್ ಶೇರಿಗಾರ್ ಹೇಳಿದರು.

ಮಾರ್ಚ್ 22 ಇದು ಕನ್ನಡ ಸಿನಿಮಾವಾದರೂ ಈ ಚಿತ್ರದ ಧ್ವನಿಸುರುಳಿ (ಆಡಿಯೋ) ಬಿಡುಗಡೆ ಸಮಾರಂಭವನ್ನು ಮಂಗಳೂರಿನಲ್ಲಿ ಮಾಡಲು ಕಾರಣ ಇದು ನಾನು ಹುಟ್ಟಿ ಬೆಳೆದ ಊರು. ನಾನು ತುಂಬಾ ಪ್ರೀತಿಸುವ ಊರು. ಹಾಗಾಗಿ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಇಲ್ಲಿಯೇ ಮಾಡಬೆಕೇಂಬ ಹಂಬಲದಿಂದ ಇಲ್ಲಿ ಈ ಕಾರ್ಯಕ್ರವನ್ನು ಮಾಡಿದ್ದೇನೆ ಎಂದು ಹೇಳಿದರು.

ಚಿತ್ರದ ನಿರ್ದೇಶಕ ಕೂಡ್ಲು ರಾಮಕೃಷ್ಣ  ಖ್ಯಾತ ನಟರಾದ ಜೈಜಗದೀಶ್, ಶರತ್ ಲೋಹಿತಾಶ್ವ, ರವಿ ಕಾಳೆ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಕ್ಮೆ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ವೆಬ್ ಸೈಟ್ ನ ಲೋಕಾರ್ಪಣೆಗೊಳಿಸಲಾಯಿತು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್‌ ಹಾಗೂ ಮೂಡ ಅಧ್ಯಕ್ಷ ಸುರೇಶ್ ಬಳ್ಳಾಲ್ ಆಕ್ಮೆ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ವೆಬ್ ಸೈಟ್ ಅನ್ನು ಬಿಡುಗಡೆಗೊಳಿಸಿ ಶುಭಾ ಹಾರೈಸಿದರು.

ಆನಂತ್ ನಾಗ್ ಅವರ ಧರ್ಮಪತ್ನಿ ಗಾಯತ್ರಿ ಆನಂತ್ ನಾಗ್ ಹಾಗೂ ಜೈಜಗದೀಶ್ ಅವರ ಧರ್ಮಪತ್ನಿ ಚಿತ್ರ ನಿರ್ಮಾಪಕಿ ಶ್ರೀಮತಿ ವಿಜಯಲಕ್ಷ್ಮಿ, ಚಿತ್ರ ಇನ್ನೋರ್ವ ನಿರ್ಮಾಪಕಿ ಶರ್ಮಿಳಾ ಶೇರಿಗಾರ್ ಉಪಸ್ಥಿತರಿದ್ದರು. ಫಾದರ್ ಮುಲ್ಲರ್ಸ್’ನ ಡೈರೆಕ್ಟರ್ ರೆ |ಫಾ |ರಿಚರ್ಡ್‌ ಅಲೋಶಿಯಸ್‌ ಕೊಯಿಲೋ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಖ್ಯಾತ ವೈದ್ಯ ಡಾ.ಕೆ.ವಿ.ದೇವಾಡಿಗ, ಎ.ಜೆ.ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗು ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಯೆನಪೋಯ ಯುನಿವರ್ಸಿಟಿಯ ಡಾ.ಅಖ್ತರ್ ಹುಸೈನ್, ಮರೀನ್ ಕ್ರಾಫ್ಟ್ಸ್ ಯುಕುಪ್ಮೆಂಟ್’ನ ಎಂ.ಕೆ.ಹರಿಶ್ಚಂದ್ರ, ಇನ್ ಲ್ಯಾಂಡ್ ಬಿಲ್ಡರ್ ಅಧ್ಯಕ್ಷ ಸಿರಾಜ್ ಅಹ್ಮದ್, ಎಸ್ ಕೆ ಎಸ್ ನ ಸನತ್ ಶೆಟ್ಟಿ, ಅತಿಥಿಗಳಾಗಿದ್ದರು.

ಪ್ರಮುಖರಾದ ಕದ್ರಿ ಮಣಿಕಾಂತ್‌, ರವಿಶೇಖರ್ ರಾಜಮಗ‌, ಕೀರ್ತಿಗೌಡ, ಸುರೇಶ್‌, ಕರಿ ಸುಬ್ಬ, ವೀರೇಶ್‌, ಡಾ| ಭಾಸ್ಕರ್‌ ಶೆಟ್ಟಿ, ಅಶೋಕ್‌ ಪುರೋಹಿತ್‌, ಪಿ.ಸಿ. ಮಲ್ಲಪ್ಪ, ಗಿರಿಧರ್‌ ಭಟ್‌, ಪ್ರಶಾಂತ್‌ ಶೇರಿಗಾರ್‌, ಶ್ರೀನಿವಾಸ ಶೇರಿಗಾರ್, ತುಳು ರಂಗದ ಮೇರು ಕಲಾವಿದರಾದ ದೇವ್ ದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಲಯನ್ ಡಿ.ಕಿಶೋರ್ ಶೆಟ್ಟಿ ಹಾಗೂ ಇತರ ಕಲಾವಿದರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಿಶೋರ್ ಬಾಯ್ ಝೋನ್ ತಂಡ ಹಾಗೂ ಚಿತ್ರದ ನಾಯಕ ನಟರಾದ ಆರ್ಯವರ್ಧನ್ ಮತ್ತು ಕಿರಣ್ ರಾಜ್ ಹಾಗೂ ನಟಿಯರಾದ ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿಯವರ ತಂಡದಿಂದ ಮೂಡಿ ಬಂದ ನೃತ್ಯ ವೈವಿಧ್ಯ ಪ್ರೇಕ್ಷರನ್ನು ಮೋಡಿ ಮಾಡಿತು. ರಾಜ್ ಗೋಪಾಲ್ ತಂಡದಿಂದ ನಡೆದಂತಹ ಸಂಗೀತ ಕಾರ್ಯಕ್ರಮ ಸಮಾರಂಭಕ್ಕೆ ಮೆರುಗು ನೀಡಿತು.

‘ಮಾರ್ಚ್ 22’ ಸಿನೆಮಾ ಮೂಲಕ ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡಲು ಈ ತಂಡ ಸಿದ್ಧತೆ ನಡೆಸಿದೆ. ಇಂಥ ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಸಿನೆಮಾವನ್ನು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. ಹರೀಶ್ ಶೇರಿಗಾರ್ ಅವರ ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ನಿರ್ಮಿಸಲಾಗಿರುವ ‘ಮಾರ್ಚ್ 22’ ಸಿನೆಮಾ ಬಗ್ಗೆ ಕನ್ನಡ ಸಿನೆಮಾ ಪ್ರಿಯರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಅನಂತ್ ನಾಗ್, ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್ ಸೇರಿದಂತೆ ಹಲವು ಹಿರಿಯ ನಟ-ನಟಿಯರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.

ಚಿತ್ರ ನಿರ್ಮಾಣ: ಹರೀಶ್ ಶೇರಿಗಾರ್ – ಶರ್ಮಿಳಾ ಶೇರಿಗಾರ್, ಕಥೆ-ಚಿತ್ರಕಥೆ-ನಿರ್ದೇಶನ: ಖ್ಯಾತ ಹಿರಿಯ ನಿರ್ದೇಶಕ ಕೊಡ್ಲು ರಾಮಕೃಷ್ಣ, ಸಂಗೀತ ನಿರ್ದೇಶಕರು: ಮಣಿಕಾಂತ್ ಕದ್ರಿ -ಎನ್.ಜೆ.ರವಿಶೇಕರ್ ರಾಜಮಗ, ಹಿನ್ನೆಲೆ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್. ರಾಜಮಗ, ಅಕ್ಷತಾ ರಾವ್, ಛಾಯಾಗ್ರಾಹಣ: ಮೋಹನ್, ಸಂಭಾಷಣೆ: ಬಿ.ಎ.ಮಧು, ಸಂಕಲನ: ಬಸವರಾಜ್ ಅರಸ್ , ಸಾಹಸ ನಿರ್ದೇಶನ: ಥ್ರಿಲ್ಲರ್ ಮಂಜು-ಕುಂಗ್ಫು ಚಂದ್ರು , ನೃತ್ಯ ನಿರ್ದೇಶನ: ಮದನ್ ಹರಿ.