ಹಿಂದೂ ಯುವತಿ ಆದಿರಾ ಇಸ್ಲಾಂ ಸೇರಲು ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಮತಾಂತರ ಪ್ರಕ್ರಿಯೆ

5:26 PM, Saturday, July 29th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

adhira ಕಾಸರಗೋಡು : ಕಾಸರಗೋಡು ಜಿಲ್ಲೆಯ ಉದುಮ ಕಣಿಯಂಬಾಡಿಯ ಹಿಂದೂ ಯುವತಿ ಆದಿರಾ(23)ಆಯಿಷಾಳಾಗಿ ಪರಿವರ್ತನೆ ಯಾಗಿರುವ ಹಿಂದೆ ಕೇರಳದ ಮತಾಂತರಗೊಳಿಸುವ ಸಂಸ್ಥೆಯೊಂದು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಲಾಗಿದೆ.

ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಆದಿರಾ, ಪದವಿ ಓದುತ್ತಿರುವಾಗಲೇ ಇಸ್ಲಾಂ ಅಧ್ಯಯನದ ಬಗ್ಗೆ ಆಸಕ್ತಿ ಅತೀವವಾಗಿತ್ತು. ಇಸ್ಲಾಂ ಅಧ್ಯಯನ ಮಾಡುವ ನಿರ್ಧಾರದಿಂದಲೇ ಜುಲೈ 10ರಂದು ಮನೆಬಿಟ್ಟಿದ್ದೇನೆ. ಕಣ್ಣೂರಿನಲ್ಲಿರುವ ಸ್ನೇಹಿತೆಯ ಮನೆಯಲ್ಲಿದ್ದು, ಆಯೆಷಾ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಇದೀಗ ಅಲ್ಲಿಂದಲೇ ಪೊಲೀಸ್ ಠಾಣೆಗೆ ಬಂದಿರುವುದಾಗಿ ಹೇಳಿದ್ದಾಳೆ.

ನ್ಯಾಯಾಲಯದಲ್ಲಿ ಕಣ್ಣೀರು ಹಾಕುತ್ತಿದ್ದ ಹೆತ್ತವರನ್ನು ಕಂಡಾಗಲೂ ಕರಗದ ಆದಿರಾ, ತನಗೆ ಹೆತ್ತವರ ಮೇಲೆ ಪ್ರೀತಿಯಿದೆ. ಆದರೆ, ನನ್ನ ಒಲವು ಇಸ್ಲಾಂ ಮೇಲಿದೆ. ನನ್ನನ್ನು ಯಾರೂ ಅಪಹರಿಸಿಲ್ಲ. ನನ್ನ ಮೇಲೆ ಒತ್ತಡ ಹೇರಿಲ್ಲ. ಐಸಿಸ್ ಸಂಘಟನೆಗೆ ಸೇರ್ಪಡೆಗೊಂಡಿರುವ ಮಾಹಿತಿ ಕೇವಲ ಊಹಾಪೋಹ. ವಿದೇಶಕ್ಕೆ ತೆರಳಲು ನನ್ನ ಬಳಿ ಪಾಸ್‍ಪೋರ್ಟ್ ಕೂಡಾ ಇಲ್ಲವೆಂದು ನ್ಯಾಯಾಲಯದ ಮುಂದೆ ಯುವತಿ ಸ್ಪಷ್ಟನೆ ನೀಡಿದ್ದಾಳೆ.

ಜುಲೈ ಮೊದಲ ವಾರದಲ್ಲಿ ನಾಪತ್ತೆ ಯಾದಾಗ, ಸಂಘಟನೆ ಯೊಂದರ ಸದಸ್ಯ ಅಪಹರಿಸಿರುವುದಾಗಿ ಹೇಳಲಾಗಿತ್ತು. ಮನೆಯವರು ಹೇಳಿಕೆ ನೀಡಿದ ಪ್ರಕಾರ ಆಕೆ ಸ್ವ ಇಚ್ಛೆಯಿಂದ ಮತಾಂತರ ಗೊಂಡಿಲ್ಲ, ಆಕೆಯ ಮನ ಪರಿವರ್ತನೆ ಮಾಡಿ ಮತಾಂತಕ್ಕೆ ಪ್ರಚೋದಿಸಲಾಗಿದೆ. ಅದರಲ್ಲಿ ಆಕೆಯ ಸಹಪಾಠಿ ಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.

ಯುವತಿ ಪ್ರಾಪ್ತವಯಸ್ಕಳಾಗಿದ್ದು, ಅವಳ ಸ್ವಂತ ನಿರ್ಧಾರಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಇಸ್ಲಾಂ ಮತದ ಬಗ್ಗೆ ಅಧ್ಯಯನ ನಡೆಸಲು ಮಂಜೇರಿಗೆ ತೆರಳುವವರೆಗೆ ಯುವತಿಗೆ ಕಾಸರಗೋಡು ಪರವನಡ್ಕದ ಮಹಿಳಾ ಮಂದಿರದಲ್ಲಿ ವಾಸ್ತವ್ಯ ಕಲ್ಪಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆದಿರಾ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಹೈಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಕೆಯನ್ನು ಆಗಸ್ಟ್ ಮೂರರಂದು ಹೈಕೋರ್ಟ್‍ಗೆ ಹಾಜರುಪಡಿಸುವಂತೆಯೂ ನ್ಯಾಯಾಲಯ ತಿಳಿಸಿದೆ.

ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಆಕೆ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾಳೆ ಎಂಬುದು ತಿಳಿದುಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English