- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಕ್ಷಾಬಂಧನ ಸ್ತ್ರೀಯು ಪುರುಷನಿಗೆ ಕಟ್ಟುವುವುದರಲ್ಲಿ ಶ್ರೇಷ್ಠವಿದೆ : ಸಂಗೀತಾ ಪ್ರಭು

Rakshbandhana [1]ಮಂಗಳೂರು: ನಗರದ ಬೋಳೂರಿನ ಪ್ರಭು ನಿವಾಸ ಕಂಪೌಂಡ್ ನಲ್ಲಿನ ಸೇವಾಕೇಂದ್ರದಲ್ಲಿ ಪತ್ರಕರ್ತರಿಗೆ ಸೇರಿದಂತೆ ಧರ್ಮಪ್ರೇಮಿಗಳನ್ನು ಒಟ್ಟುಸೇರಿಸಿ ಶಾಸ್ತ್ರೋಕ್ತವಾಗಿ ರಾಖಿ ಕಟ್ಟಲಾಯಿತು.

ಸನಾತನ ಸಂಸ್ಥೆಯ ವಕ್ತಾರರಾದ ಸೌ. ಸಂಗೀತಾ ಪ್ರಭು ಇವರು ರಕ್ಷಾಬಂಧನದ ಮಹತ್ವದ ಕುರಿತಾಗಿ ಮಾತನಾಡುತ್ತಾ, ಶ್ರಾವಣ ಮಾಸದ ಹುಣ್ಣಿಮೆಯ ದಿನ ಸೋದರನಿಗೆ ಸೋದರಿಯು ರಕ್ಷೆಯನ್ನು ಕಟ್ಟುವುದಕ್ಕೆ ರಕ್ಷಾಬಂಧನ ಎಂದು ಹೇಳುತ್ತಾರೆ, ‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’

ರಾಖಿಯನ್ನು ಕಟ್ಟುವವರಿಗೆ ತೇಜತತ್ತ್ವ, ಪುರುಷರಿಗೆ ಶಕ್ತಿ ತತ್ತ್ವ ಕೊಡುಕೊಳ್ಳುವ ಲೆಕ್ಕಾಚಾರ ಅಂದರೆ ಪ್ರಾರಬ್ಧ ಕಡಿಮೆಯಾಗುತ್ತದೆ. ರಕ್ಷಣೆ ನೀಡುವ ಸಹೋದರಿ ಸಹೋದರನಿಗೆ ಕಟ್ಟುವುದಕ್ಕಿಂತ ಇಂದು ಸಮಾಜದಲ್ಲಿನ ಸ್ತ್ರೀಯು ಪುರುಷನಿಗೆ ಕಟ್ಟುವುದು ಶ್ರೇಷ್ಠವಿದೆ.
Rakshbandhana [2]
ಪತ್ರಕರ್ತರು ಸೇರಿದಂತೆಸ ಸುಮಾರು 20 ಧರ್ಮಪ್ರೇಮಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದುಕೊಂಡರು.

ರಕ್ಷಾಬಂಧನದ ಉದ್ದೇಶವನ್ನು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರಮೊಗೇರ, ಮಂಜುಳಾ ಗೌಡ, ಕಾರ್ಯಕ್ರಮದ ಮಹತ್ವ ಸೌ. ಸಂಗೀತಾ ಪ್ರಭು, ಕು.ರೂಪಾ, ಕು.ಚೈತನ್ಯ, ಕು. ಕುಸುಮಾವತಿ ಇವರು ಉಪಸ್ಥಿತ ಶಾಸ್ತ್ರೋಕ್ತವಾಗಿ ರಕ್ಷೆಯನ್ನು ಕಟ್ಟಿ ರಕ್ಷಾಬಂಧನವನ್ನು ಕಟ್ಟಿದರು.
ಆದರ್ಶ ಗಣೇಶೋತ್ಸವ ಆಚರಣೆಯ ಪಧ್ದತಿ ಹಾಗೆಯೇ ಆಗಸ್ಟ್ 15 ರಂದು ಆಗುವ ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟುವ ಕುರಿತಾಗಿ ವೀಡಿಯೋವೊಂದನ್ನು ತೋರಿಸಲಾಯಿತು. ಪ್ರತಿ ತಿಂಗಳಿಗೊಮ್ಮೆ ಇದೇ ರೀತಿ ಹಿಂದುತ್ವನಿಷ್ಠರು ಸೇರಿ ಧರ್ಮಜಾಗೃತಿಯ ಕಾರ್ಯ ಮಾಡುವ ನಿಯೋಜನೆ ಮಾಡಲಾಯಿತು.
Rakshbandhana [3]
ಅದೇ ರೀತಿ ಅಪರ ಜಿಲ್ಲಾಧಿಕಾರಿಗಳಾದ ಕುಮಾರ , ಪೊಲೀಸ್ ಕಮಿಷನರ್, ಐ.ಜಿ.ಪಿ ಎಸ್ಪಿ ಪೊಲೀಸ್ ಇಲಾಖೆಗೆ ಸೇರಿದಂತೆ ನಗರದ ಧರ್ಮಪ್ರೇಮಿಗಳ ಬಳಿ ತೆರಳಿ ರಕ್ಷಾಬಂಧನವನ್ನು ಕಟ್ಟಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಗಣ್ಯರಿಗೆ . ರಾಖಿಯನ್ನು ಕಟ್ಟಿದರು.

Rakshbandhana [4]

Rakshbandhana [5]