ಶರತ್ ಹತ್ಯೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ವಿಫಲವಾದ ಪೊಲೀಸ್ : ಧರಣಿ

12:15 AM, Wednesday, August 9th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

HHVಮಂಗಳೂರು: ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಹತ್ಯೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ವಿಫಲವಾದ ರಾಜ್ಯ ಸರ್ಕಾರದ ಮತ್ತು ಪೋಲೀಸರ ವಿರುದ್ಧ  ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭ ಮಾತನಾಡಿದ ವಿಶ್ವಹಿಂದೂ ಪರಿಷತ್ ಪ್ರಮುಖ ಜಗದೀಶ ಶೇಣವ ಅವರು, ಅಶ್ರಫ್ ಕೊಲೆ ನಡೆದ 48 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಶರತ್ ಕೊಲೆ ಆರೋಪಿಗಳನ್ನು ಒಂದು ತಿಂಗಳಾದರೂ ಪೊಲೀಸರು ಬಂಧಿಸಿಲ್ಲ. ಅಶ್ರಫ್ ಶವಯಾತ್ರೆ ನಡೆದಾಗ ನಡೆದ ಅಹಿತಕರ ಘಟನೆಗಳಲ್ಲಿ ಹಿಂದೂ ಯುವಕರನ್ನೇ ಬಂಧಿಸಿದರು.

HHVಶರತ್ ಮಡಿವಾಳ್ ಶವಯಾತ್ರೆಯಲ್ಲಿ ನಡೆದ ಕಲ್ಲು ತೂರಾಟ ಮಾಡಿದ ಆರೋಪಿಗಳು ಯಾರೆಂಬುದು ಪೊಲೀಸರಿಗೆ ಗೊತ್ತಿದ್ದರೂ ಹಿಂದೂಗಳ ಮೇಲೆಯೇ 308 ಕೇಸು ದಾಖಲಿಸಿದ್ದಾರೆ. ಇದೆಂಥ ನ್ಯಾಯವೆಂದು ಶೇಣವ ಪ್ರಶ್ನಿಸಿದರು.

ಈ ಸಂದರ್ಭ ಎಂ.ಬಿ.ಪುರಾಣಿಕ್, ಶರಣ್ ಪಂಪುವೆಲ್, ಮೋನಪ್ಪ ಭಂಡಾರಿ , ಸಂಜಿವ ಮಠಂದೂರು, ಜಗದೀಶ್ ಶೆಣೈ, ಸತ್ಯಜಿತ್ ಸುರತ್ಕಲ್, ಪೂಜಾ ಪೈ ಮತ್ತಿತರು ಈ ಸಂದರ್ಭ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English