ಬೆಂಗ್ರೆಯ ಶಿವಾಜಿ ಪಾರ್ಕ್‌ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ

9:30 PM, Monday, August 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Shivaji statue ಮಂಗಳೂರು: ವಿಶ್ವ ಹಿಂದೂ ಪರಿಷತ್‌ನ ಸ್ವರ್ಣ ಮಹೋತ್ಸವದ ಪ್ರಯುಕ್ತ ಬೆಂಗ್ರೆಯ ಭಾರತ್‌ ಮಾತಾ ಶಾಖೆಯ ವಿಶ್ವಹಿಂದೂ ಪರಿಷತ್‌ ಬಜರಂಗ ದಳದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮಂಗಳೂರಿನ ಬೆಂಗ್ರೆಯ ಶಿವಾಜಿ ಪಾರ್ಕ್‌ ಬಳಿ ಭಾನುವಾರ ಲೋಕಾರ್ಪಣೆಗೊಂಡಿತು.

ವಾಜಿ ಮಹಾರಾಜರ ಪ್ರತಿಮೆಯನ್ನು ಮಹಾರಾಷ್ಟ್ರ ಗೃಹಸಚಿವ ದೀಪಕ್‌ ವಸಂತ್‌ರಾವ್‌ ಕೆಸರ್‌ಕರ್‌ ಅವರು  ಲೋಕಾರ್ಪಣೆಗೊಳಿಸಿದರು. ಈ ಮೂಲಕ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಕರಾವಳಿ ತೀರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆಗೊಂಡತಾಗಿದೆ.

ಶಿವಾಜಿಯ ಆದರ್ಶಗಳು ಹಿಂದೂ ಧರ್ಮಕ್ಕೆ ಎಂದೆಂದಿಗೂ ಅನುಕರಣೀಯ. ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಲ್ಲ. ಈ ನಿಟ್ಟಿನಲ್ಲಿ ಮಂಗಳೂರಿನ ಕಡಲ ತೀರದಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿರುವುದು ಶ್ಲಾಘ ನೀಯ ಎಂದು ಗೃಹಸಚಿವರು ಹೇಳಿದರು.

ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯ ಕಾರಿಣಿ ಸದಸ್ಯ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಧ್ವಜಾರೋಹಣ ನೇರವೇರಿಸಿದರು. ಹಿಂದೂ ದೇವಾಲಯಗಳ ಹಣವನ್ನು ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹಾಗೂ ಹಿಂದೂ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ವಿನಿಯೋಗವಾಗು ವಂತೆ ಮುಜರಾಯಿ ಇಲಾಖೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಉದ್ಯಮಿ ಸಂತೋಷ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌, ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಧಾರ್ಮಿಕ ಮುಖಂಡ ಶ್ರೀಕರ ಪ್ರಭು, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್‌ ಕುತ್ತಾರ್‌, ಬಜರಂಗದಳ ಸಂಯೋಜಕರಾದ ಭುಜಂಗ ಕುಲಾಲ್‌, ಪ್ರವೀಣ್‌ ಕುತ್ತಾರ್‌, ವಿಹಿಂಪ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಬೆಂಗ್ರೆ ಮಹಾಜನಾ ಸಭಾ ಅಧ್ಯಕ್ಷ ಮೋಹನ್‌ ಬೆಂಗ್ರೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English