ಭಾರತದ ಆರ್ಥಿಕ ನೀತಿಗೆ ನೆಹರೂ ಕೊಡುಗೆ ಅಪಾರ : ಪ್ರೊ| ವಿ.ಕೆ. ನಟರಾಜ್‌

4:41 PM, Friday, August 19th, 2011
Share
1 Star2 Stars3 Stars4 Stars5 Stars
(No Ratings Yet)
Loading...

Mangalore University/ ಪ್ರೊ| ವಿ.ಕೆ. ನಟರಾಜ್‌

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ನೂತನವಾಗಿ ಪ್ರಾರಂಭಿಸಲ್ಪಟ್ಟ ನೆಹರೂ ಅಧ್ಯಯನ ಕೇಂದ್ರದ ಉದ್ಘಾಟನೆಯನ್ನು ಗುರುವಾರ ಮಂಗಳೂರು ವಿಶ್ವದ್ಯಾನಿಲಯದ ಹಳೆ ಸೆನೆಟ್‌ ಸಭಾಂಗಣದಲ್ಲಿ ನಿವೃತ್ತ ಪ್ರೊಫೆಸರ್‌ ಹಾಗೂ ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡೆವಲಪ್‌ಮೆಂಟ್‌ ಸ್ಟಡೀಸ್‌ನ ವಿಶ್ರಾಂತ ನಿರ್ದೇಶಕ ಪ್ರೊ| ವಿ.ಕೆ. ನಟರಾಜ್‌ ನೆರವೇರಿಸಿದರು.

ವಿಜ್ಞಾನ ತಂತಜ್ಞಾನದ ಅಭಿವೃದ್ಧಿಯ ದೂರದೃಷ್ಟಿತ್ವ ಅಪಾರವಾಗಿದ್ದು, ಭಾರತದ ಆರ್ಥಿಕ ನೀತಿಗೆ ತಳಪಾಯ ಹಾಕುವಲ್ಲಿ ಜವಾಹರ್‌ ಲಾಲ್‌ ನೆಹರೂ ಅವರ ಕೊಡುಗೆ ಅಪಾರ ಎಂದು ಪ್ರೊ| ವಿ.ಕೆ. ನಟರಾಜ್‌ ಉದ್ಘಾಟನೆ ಬಳಿಕ ತಮ್ಮ ಭಾಷಣದಲ್ಲಿ ಹೇಳಿದರು.

ಸ್ವಾತಂತ್ರ ಭಾರತದ ಆರ್ಥಿಕ ಸ್ಥಿತಿ ಅತ್ಯಂತ ದುರ್ಬಲವಿದ್ದ ಸಂದರ್ಭದಲ್ಲಿ, ಭಾರತವನ್ನು ಆರ್ಥಿಕವಾಗಿ ಅಬಿವೃದ್ಧಿಗೆ ನೆಹರೂ ಅವರು ಪ್ರಮುಖ ಪಾತ್ರ ವಹಿಸಿದ್ದು ಮಾತ್ರವಲ್ಲದೆ ಅವರು ಪ್ರಧಾನಿಯಾದ ಮೂರೇ ವರ್ಷದಲ್ಲಿ ಎಲ್ಲರಿಗೂ ಮತದಾನದ ಹಕ್ಕನ್ನು ಒದಗಿಸಿದ್ದರು ಎಂದರು.

ಮಹಾತ್ಮಾ ಗಾಂಧೀಜಿಯವರ ವಿಚಾರದಲ್ಲಿ ಬಂದಷ್ಟು ವಿಮಶಾìತ್ಮಕ ಲೇಖನಗಳು, ಪುಸ್ತಕಗಳು ನೆಹರೂ ಅವರ ವಿಚಾರದಲ್ಲಿ ಬಂದಿಲ್ಲ ಈ ನಿಟ್ಟಿನಲ್ಲಿ ನೆಹರೂ ಅದ್ಯಯನ ಕೇಂದ್ರ ಕಾರ್ಯ ನಿರ್ವಹಿಸಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವದ್ಯಾನಿಲಯದ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ವಹಿಸಿದ್ದರು. ಕುಲಸಚಿವ ಪ್ರೊ| ಚಿನ್ನಪ್ಪ ಗೌಡ ಉಪಸ್ಥಿತರಿದ್ದರು.

ನೆಹರೂ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ಆರ್‌. ಶಶಿಧರ್‌ ಸ್ವಾಗತಿಸಿದರು. ಸಮುದ್ಯತಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ| ರವಿಶಂಕರ್‌ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English