- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೆಚ್ಚುತ್ತಿರುವ ಗಾಂಜಾ ಮಾರಾಟ, ಸಿಕ್ಕಿ ಬಿದ್ದ ನಾಲ್ವರು ವಿದ್ಯಾರ್ಥಿಗಳು.

Ganja Students [1]

ಮಂಗಳೂರು : ಬರ್ಕೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಮಂಗಳೂರು ಸೆಂಟ್ರಲ್‌ ವಿಭಾಗದ ಎಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಲಾಡ್ಜ್ ಒಂದಕ್ಕೆ ದಾಳಿ ನಡೆಸಿ 4 ಮಂದಿ ಕಾಲೇಜು ವಿದ್ಯಾರ್ಥಿಗಳ ಬಳಿಯಿಂದ 2500 ರೂ. ಬೆಲೆಯ 100. 2 ಗ್ರಾಂ ಗಾಂಜಾ, 5390 ರೂ. ನಗದು ಹಾಗೂ 6 ಮೊಬೈಲ್‌ ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಾದ ಸಿಯಾರ್‌, ಮಹಮದ್‌ ರಿಶಿನ್‌, ಮುನೀರ್ ಮತ್ತು ರಶೀದ್‌ ಅವರ ಮೇಲೆ ಮಾದಕ ವಸ್ತು ಸಾಗಾಟ ನಿರ್ಬಂಧ ಕಾಯ್ದೆಯನ್ವಯ ಕೇಸು ದಾಖಲಿಸಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂದಿಸಿದ್ದು ಜೇಸನ್‌ ಎಂಬಾತ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಆತನ ವಿಳಾಸ ಇನ್ನೂ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿ ಬಿದ್ದ ಆರೋಪಿಗಳೆಲ್ಲರೂ ಕೇರಳದವರಾಗಿದ್ದು. ಖಚಿತ ಮಾಹಿತಿ ಮೇರೆಗೆ ಈ ದಾಳಿ ಕಾರ್ಯಾಚರಣೆ ನಡೆದಿದ್ದು, ಬರ್ಕೆ ಪಿಎಸ್‌ಐ ಪೂವಪ್ಪ ಮತ್ತು ಸಿಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.