ಗೌರಿ ಹತ್ಯೆ, ಮೂವರು ಶಂಕಿತ ಆರೋಪಿಗಳ ಮೇಲೆ ಅನುಮಾನ

4:06 PM, Friday, October 6th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Gowri Killersಬೆಂಗಳೂರು: ಮೂವರು ಶಂಕಿತ ಆರೋಪಿಗಳ ಮೇಲೆ ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ.

ಎಸ್ಐಟಿ ಅಧಿಕಾರಿಗಳು, ಮೂವರು ಮಾಸ್ಟರ್ ಪ್ಲಾನ್ ನಡೆಸಿ ಹತ್ಯೆ ನಡೆಸಿರಬಹುದು ಎಂದು  ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮೂವರು ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು, ಈ ಹತ್ಯೆ ನಡೆಸಿರಬಹುದು ಎಂಬುದು ಎಸ್‌ಐಟಿ ಶಂಕೆ ವ್ಯಕ್ತಪಡಿಸಿದೆ.

ಮಾಲೆಗಾವ್ ಸ್ಫೋಟ ಪ್ರಕರಣದ ಆರೋಪಿ ಜಯಪ್ರಕಾಶ್, ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳಾದ ಪ್ರವೀಣ್ ಲಿಮ್ಕರ್, ಸಾರಂಗ್ ಆಕೋಲ್ಕರ್ ಮೇಲೆ ಎಸ್ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂವರೂ ಆರೋಪಿಗಳು ಈಗ ತಲೆಮರೆಸಿಕೊಂಡಿದ್ದು ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಎನ್ಐಎ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಮೂವರೂ ಆರೋಪಿಗಳ ಹಿನ್ನೆಲೆ, ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಆದ್ರೆ ಮೂವರೂ ಆರೋಪಿಗಳು ಹಲವು ದಿನಗಳಿಂದ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಎನ್ಐಎ ಅಧಿಕಾರಿಗಳು ಎಸ್ಐಟಿಗೆ ಮಾಹಿತಿ ನೀಡಿದ್ದಾರೆ.
ಮೂವರು ಶಂಕಿತ ಆರೋಪಿಗಳ ಮೇಲೆ ಅನುಮಾನ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English