- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

kuppepadav [1]ಮಂಗಳೂರು: ಡೈರಿಗೆ ಹಾಲು ಹಾಕಿ ಮನೆಗೆ ಬರುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವನನ್ನು ಬಜಪೆ ಪೊಲೀಸರು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಪ್ಪೆಪದವು ಆಚಾರಿ ಜೋರ ನಿವಾಸಿ ಮಹಮ್ಮದ್ ಫೈಜಾಲ್ (37) ಬಂಧಿತ ಆರೋಪಿ. ಬಾಲಕಿ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದು, ಅ.10ರಂದು ಬೆಳಗ್ಗೆ ಡೈರಿಗೆ ಹಾಲು ಹಾಕಿ ಮರಳಿ ಮನೆಗೆ ಬರುತ್ತಿರುವಾಗ ಆರೋಪಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆ ಕಾರ್ಯ ನಡೆಸಿದ ಪೊಲೀಸರು ಆರೋಪಿಯನ್ನು ಕುಪ್ಪೆಪದವಿನಲ್ಲಿ ಬಂಧಿಸಿದ್ದಾರೆ.

ಆರೋಪಿಯು ಫೈಜಾಲ್ ರಿಕ್ಷಾ ಚಾಲಕನಾಗಿದ್ದು, ಕುಪ್ಪೆಪದವು ಪಂಚಾಯಿತಿಯಲ್ಲಿ ನೀರು ಸರಬರಾಜು ಕೆಲಸವನ್ನೂ ಮಾಡುತ್ತಿದ್ದ. ಈತನಿಗೆ ಎರಡು ಮದುವೆ ಕೂಡಾ ಆಗಿತ್ತು ಎನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.