- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಪು: ಅಶಕ್ತ, ಅನಾಥ ಮಕ್ಕಳೊಂದಿಗೆ ಕಾಂಗ್ರೆಸ್ ದೀಪಾವಳಿ ಆಚರಣೆ

Diwali celebration [1]ಮಂಗಳೂರು:  ಕಾಪು ಕಾಂಗ್ರೆಸ್ ಹಿಂದುಳಿದ ವರ್ಗ ಕಟಪಾಡಿ ಬಳಿಯ ಶಂಕರ ಪುರ ವಿಶ್ವಾಸದ ಮನೆಯಲ್ಲಿ ಅಶಕ್ತ, ಅನಾಥ ಮಕ್ಕಳೊಂದಿಗೆ ಹಾಗೂ ವಯೋ ವೃದ್ಧರೊಂದಿಗೆ ದೀಪಾವಳಿ ಸಂಭ್ರವನ್ನು ಆಚರಿಸಿತು. ಇಲ್ಲಿಯ ಮಕ್ಕಳಿಗೆ ವಯೋವೃದ್ಧರಿಗೆ ಸಿಹಿ ತಿಂಡಿ ಹಾಗೂ ಬಟ್ಟೆ ಬರೆಗಳನ್ನು ಈ ಸಂದರ್ಭ ವಿತರಿಸಲಾಯಿತು.

ಕಾಪು ಶಾಸಕ ವಿನಂ ಕುಮಾರ್ ಸೊರಕೆ ಮಾತನಾಡಿ, ದೀಪಾವಳಿ ಹಬ್ಬದ ಪ್ರಥಮ ದಿನವನ್ನು ಶಂಕರಪುರದ ಅನಾಥರ ವಿಶ್ವಾಸದ ಮನೆಯಲ್ಲಿ ಕಾಪು ಕಾಂಗ್ರೆಸ್ ಆಚರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ. ವಿಶ್ವಾಸದ ಮನೆಗೆ ನಮ್ಮ ರಾಜ್ಯಕ್ಕೆ ಸಂಬಂಧ ಪಟ್ಟವರಲ್ಲದೆ ದೇಶದ ಮೂಲೆ ಮೂಲೆಗಳಿಂದಲೂ ಅಶಕ್ತರು ಮಾನಸಿಕ ಅಸ್ವಸ್ಥರನ್ನು ಕರೆತಂದು ಶುಷ್ರೂಶೆ ನೀಡಲಾಗುತ್ತದೆ. ನೂರಾರು ಮಂದಿ ಮಾನಸಿಕ ರೋಗಿಗಳು ಇಲ್ಲಿ ಗುಣ ಮುಖರಾಗಿ ತಮ್ಮ ತಮ್ಮ ರಾಜ್ಯಕ್ಕೆ ತೆರಳಿದ್ದುದು ಸಂತಸ ತಂದಿದೆ. ಇಲ್ಲಿಯ ಮಾನವೀಯ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸುವುದರ ಮೂಲಕ ನಮ್ಮಲ್ಲಿ ಸಾರ್ಥಕತೆ ಕಾನೋಣ ಎಂದು ಸೊರಕೆ ಹೇಳಿದ್ದಾರೆ.

ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ ಶೆಟ್ಟಿ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ, ಹಿಂದುಳಿದ ವರ್ಗ ಮೊರ್ಚಾದ ಅಧ್ಯಕ್ಷ ದೀಪಕ್ ಎರ್ಮಾಳ್, ಆಶಾ ಕಟಪಾಡಿ, ತಾಲೂಕು ಪಂಚಾಯತ್ ಸದಸ್ಯರಾದ ಗೀತಾ ವಾಗ್ಲೆ, ರಾಜೇಶ್ ಶೆಟ್ಟಿ, ದಿನೇಶ್ ಕೋಟ್ಯಾನ್ ಫಲಿಮಾರ್, ಕಾಪು ಪುರಸಭಾಧ್ಯಕ್ಷೆ ಸೌಮ್ಯ ಸಂಜೀವ, ಉಪಧ್ಯಕ್ಷ ಉಸ್ಮಾನ್, ಹರೀಶ್ ನಾಯಕ್ ಕಾಪು, ನಾಗೇಶ್ ಸುವರ್ಣ, ಮಾಧವ ಪಾಲನ್, ಅಶೋಕ್ ರಾವ್ ಪ್ರಸಿಲ್ಲಾ ಡಿಮೆಲ್ಲೊ, ಗಣೇಶ್ ಕೋಟ್ಯಾನ್, ಕೇಶವ ಹೆಜಮಾಡಿ, ಹರೀಶ್ ಶೆಟ್ಟಿ ಪಾಂಗಳ ಮತ್ತಿತರರು ಉಪಸ್ಥಿತರಿದ್ದರು.