ಮಂಗಳೂರು: ರಂಗಚಾವಡಿ ಮಂಗಳೂರು, ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆಯ ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 5ರಂದು ಭಾನುವಾರ ಸಂಜೆ 3.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ. ಈ ಬಾರಿಯ ರಂಗಚಾವಡಿ ಪ್ರಶಸ್ತಿಯನ್ನು ಉದಯವಾಣಿಯ ಮಂಗಳೂರು ಸುದ್ದಿ ವಿಭಾಗದ ಮುಖ್ಯಸ್ಥರಾದ ಮನೋಹರ್ ಪ್ರಸಾದ್ ಪಡೆಯಲಿದ್ದಾರೆ. ಪತ್ರಿಕೋದ್ಯಮದಲ್ಲಿ 35 ವರ್ಷಕ್ಕೂ ಮಿಕ್ಕಿ ಸೇವೆಗೈದಿರುವ ಮನೋಹರ್ ಪ್ರಸಾದ್‌ರನ್ನು ಈ ಬಾರಿ ರಂಗಚಾವಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ ಬರೆದಿರುವ ತುಳು ಸಿನಿಮಾವಲೋಕನ ಕೃತಿ ಲೋಕಾರ್ಪಣೆಗೊಳ್ಳಲಿದೆ. ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ರಾಜು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಲನಚಿತ್ರ ನಿರ್ಮಾಪಕರಾದ ಡಾ. ಸಂಜೀವ ದಂಡಕೇರಿ ಅವರು ವಹಿಸಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತುಳು ಸಿನಿಮಾವಲೋಕನ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಾಯಿ ವಿ.ಕೆ. ಗ್ರೂಪ್ ಆಫ್ ಕಂಪೆನಿಯ ಚೆಯರ್‌ಮೆನ್ ಕರುಣಾಕರ ಶೆಟ್ಟಿ ಮದ್ಯಗುತ್ತು, ಬಂಟರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ವಿನಯ ಆಸ್ಪತ್ರೆಯ ಎಂ.ಡಿ. ಡಾ. ಹನ್ಸ್‌ರಾಜ್ ಆಳ್ವ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ರಾಮ್ ಶೆಟ್ಟಿ, ಎ. ಬದ್ರಿನಾಥ್ ಕಾಮತ್, ಸುರೇಶ್ ಭಂಡಾರಿ ಕಡಂದಲೆ, ಯಾದವ ಕೋಟ್ಯಾನ್ ಪೆರ್ಮುದೆ, ಎಂ. ದೇವಾನಂದ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಕುದ್ರಾಡಿಗುತ್ತು ಚಂದ್ರಶೇಖರ ಮಾಡ, ಎ. ಶಿವಾನಂದ ಕರ್ಕೇರ, ಪ್ರತಿಭಾ ಕುಳಾಯಿ, ರಮಾನಾಥ ಶೆಟ್ಟಿ ಬೈಕಂಪಾಡಿ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಅಶೋಕ್ ಶೆಟ್ಟಿ ಸುರತ್ಕಲ್ ಮೊದಲಾದವರು ಭಾಗವಹಿಸಲಿದ್ದಾರೆ.
ಬಳಿಕ ನಿಶಾನ್ ರೈಯಿಂದ ಗಾನಬೈಭವ ಹಾಗೂ ಕಾಪು ಪ್ರಶಂಸ ತಂಡದಿಂದ ‘ಬಲೆ ತೆಲಿಪುಲೆ’ ಹಾಸ್ಯ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
Click this button or press Ctrl+G to toggle between Kannada and English