- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ವಿರುದ್ಧ ವ್ಯಂಗ್ಯ

Face book comment [1]ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕುರಿತಂತೆ ವ್ಯಂಗ್ಯ ಮಾಡಿ ಸಂದೇಶವನ್ನು ಶೇರ್‌ ಮಾಡಿದ್ದಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ರಾಜ ಶಿವಪ್ಪ ಎಂಬುವವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವಮಾನಿಸಿದ ಫೇಸ್‌ಬುಕ್‌ನಲ್ಲಿನ ಸಂದೇಶವನ್ನು ಶೇರ್ ಮಾಡಿಕೊಂಡಿದ್ದರು. ‘ಕೋಟ್ಯಂತರ ಹಿಂದೂ ಜನ ಆರಾಧಿಸುವ ನಾಡಿನ ಪ್ರಮುಖ ದೇವಸ್ಥಾನವನ್ನು ಮಾಂಸದ ಊಟ ಸೇವಿಸಿ ದೇವರ ದರ್ಶನ ಮಾಡಿದ ಮುಖ್ಯಮಂತ್ರಿ’ ಎಂದು ಫೇಸ್‌ಬುಕ್ ಖಾತೆಯೊಂದರಲ್ಲಿ ಹಾಕಲಾಗಿತ್ತು.

ಅಲ್ಲದೇ, ‘ಮೈಲಾರಿ ಕಂಡಾಗ ಸಿಡುಕಿದ ಮುಖ ಮುಲ್ಲಾನನ್ನು ಕಂಡಾಗ ಅರಳಿದ ಮುಖ’ ಎಂದು ಬರೆದು ಫೊಟೋ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಲ್ಲದೆ ಮುಖ್ಯಮಂತ್ರಿಯವರನ್ನು ‘ಸಿದ್ದು ಖಾನ್’ ಎಂದು ಸಂಬೋಧಿಸಿ ಬರಹ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ರಾಜ ಶಿವಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ರಾಜ ಶಿವಪ್ಪ ಮೂಲತ: ಬಾಗಲಕೋಟೆಯ ಬೆಣೆಕಟ್ಟಿ ಗ್ರಾಮದವನಾಗಿದ್ದು, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ಈತ ಪ್ರಸ್ತುತ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.