ಮಂಗಳೂರು: ಕೋಟೆಕಾರುಲ್ಲಿರುವ ಕೋ- ಆಪರೇಟಿವ್ ಸೊಸೈಟಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೊಸೈಟಿಯ ಮೂವರು ಖಾಸಗಿ ಭದ್ರತಾ ಸಿಬ್ಬಂದಿ ರೂಂನೊಳಗೆ ಜನರೇಟರ್‌ನಿಂದ ವಿಷಾನಿಲ ಹೊರಸೂಸಿದ ಪರಿಣಾಮವಾಗಿ ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು ಕೊಠಡಿ ಒಳಗಡೆ ಇದ್ದ ಜನರೇಟರ್‌ನಿಂದ ಹೊರಸೂಸಿದ ವಿಷಾನಿಲ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳೀಯ ನಿವಾಸಿಗಳಾದ ಉಮೇಶ್, ಸಂತೋಷ್, ಸೋಮನಾಥ ಸೊಸೈಟಿ ಕೊಠಡಿ ಒಳಗಡೆ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದರು. ಮಂಗಳವಾರ ಬೆಳಗ್ಗೆ ಕಚೇರಿ ಸಿಬ್ಬಂದಿ ಬಾಗಿಲು ತೆರೆಯಲು ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು.
ಸೋಮವಾರ ರಾತ್ರಿ ಭಾರಿ ಸಿಟಿಲಿನ ಆರ್ಭಟ ಇದ್ದು, ವಿದ್ಯುತ್ ಕೈ ಕೊಟ್ಟಿತ್ತು. ಈ ಸಂದರ್ಭ ಭದ್ರತಾ ಸಿಬ್ಬಂದಿ ಒಳಗಡೆ ಇದ್ದ ಸಣ್ಣ ಜನರೇಟರ್ ಆನ್ ಮಾಡಿ ಕೊಠಡಿಯ ಎಲ್ಲ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿದ್ದರು. ಈ ಸಂದರ್ಭ ಜನರೇಟರ್‌ನಿಂದ ಹೊರ ಬಂದ ಕಾರ್ಬನ್ ಮೊನಾಕ್ಸೈಡ್ ಕೊಠಡಿ ಒಳಗಡೆ ಹರಡಿ ಸಿಬ್ಬಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ತಿಂಗಳ ಹಿಂದಷ್ಟೇ ಈ ಬ್ಯಾಂಕ್‌ನಲ್ಲಿ ದರೋಡೆ ಯತ್ನನಡೆದಿತ್ತು. ಸಾಮಾನ್ಯವಾಗಿ ಇಬ್ಬರು ಭದ್ರತಾ ಸಿಬ್ಬಂದಿ ಇಲ್ಲಿಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ರಾತ್ರಿ ಒಬ್ಬರುಡ್ಯೂಟಿ ಬದಲಾಯಿಸುವ ಸಂದರ್ಭದಲ್ಲೇ ವಿಪರೀತ ಮಳೆ ಬಂದ ಹಿನ್ನೆಲೆಯಲ್ಲಿ ಎಲ್ಲರೂ ಒಳಗಡೆ ಮಲಗಿದ್ದರು.
ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದ ಪೊಲೀಸರ ತಂಡ ತಜ್ಞರ ಜತೆ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ವಿಷಾನಿಲ ಸಾವಿಗೆ ಕಾರಣ ಎಂಬುದು ದೃಢಪಟ್ಟಿದೆ. ಯಾವುದೇ ದುಷ್ಕೃತ್ಯ ಇದರಲ್ಲಿ ಕಂಡು ಬರುತ್ತಿಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English