- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಪತ್ರಿಕಾ ಪರಿಷತ್

pathrika parishath [1]ಮಂಗಳೂರು: ಯಾವುದೇ ಎಡಪಂಥೀಯ ವ್ಯಕ್ತಿಯ ಹತ್ಯೆಯಾದಾಗ ಬಲಪಂಥೀಯ ಸಂಘಟನೆಗಳ ಮೇಲೆ ಆರೋಪ ಮಾಡಲಾಗುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಭೂಮಿಕೆಯನ್ನು ಸ್ಪಷ್ಟಪಡಿಸಲು ಇದೇ ಭಾನುವಾರ ಸಾಯಂಕಾಲ 4.30 ಗಂಟೆಗೆ ಮಂಗಳೂರಿನ ವಿ ಟಿ ರೋಡ್ ನಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಜನಸಂವಾದ ಸಭೆ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ ಇವರು ಶುಕ್ರವಾರ ಇಲ್ಲಿ ನಡೆದ ಪತ್ರಿಕಾ ಪರಿಷತ್ ನಲ್ಲಿ ಮಾಹಿತಿ ನೀಡಿದರು.

ಶ್ರೀ ಗುರುಪ್ರಸಾದ ಗೌಡ ಮುಂದೆ ಮಾತನಾಡುತ್ತಾ, ಪತ್ರಕರ್ತೆ ಗೌರಿ ಲಂಕೇಶರವರ ಹತ್ಯೆಯ ನಂತರದ ವಿದ್ಯಮಾನಗಳನ್ನು ಗಮನಿಸಿದಾಗ ಎಡಪಂಥೀಯರು ಹತ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ದಳ ತನಿಖೆ ನಡೆಸುತ್ತಿದೆ, ಹಿಂದೂತ್ವವಾದಿಗಳ ಸಂದರ್ಭದಲ್ಲಿ ಯಾವುದೇ ಪುರಾವೆ ಸಿಗದಿರುವಾಗಲೂ ಎಡಪಂಥೀಯರು ಹತ್ಯೆಯ ಆರೋಪವನ್ನು ಹಿಂದೂ ಸಂಘಟನೆಗಳ ಮೇಲೆ ಹಾಕುತ್ತಿದ್ದಾರೆ.

ಎಡಪಂಥೀಯರು ರಾಜ್ಯ ಸರಕಾರದ ವೈಪಲ್ಯದ ಬಗ್ಗೆ ಪ್ರಶ್ನಿಸದೇ, ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅವರಿಗೆ ನಕ್ಸಲರ ಜೊತೆಗೆ ಇರುವ ಆಯಾಮವನ್ನು ದುರ್ಲಕ್ಷಿಸಲಾಗುತ್ತಿದೆ. ಒಟ್ಟಾರೆ ತನಿಖಾ ಸಂಸ್ಥೆಯ ತನಿಖೆಯ ದಿಶೆಯನ್ನು ಬದಲಿಸುವುದು ಮತ್ತು ಹಿಂದೂ ಸಂಘಟನೆಗಳ ತೇಜೊವಧೆಯನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ.ಈ ದೃಷ್ಟಿಯಿಂದ ಹಿಂದೂ ಸಂಘಟನೆಗಳ ಭೂಮಿಕೆಯನ್ನು ಸಮಾಜದ ಮುಂದೆ ಇಡಲು ಮತ್ತು ಹಿಂದೂ ಸಂಘಟನೆಗಳ ಮೇಲಿನ ಸುಳ್ಳು ಆರೋಪಗಳಿಗೆ ಉತ್ತರ ನೀಡಲು ಸಾರ್ವಜನಿಕ ಜನಸಂವಾದ ಸಭೆಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಶಕ್ತಿ ಪೀಠ, ಶ್ರೀ ಕ್ಷೇತ್ರ ಕರಿಂಜೆ, ಮೂಡಬಿದ್ರೆ, ನ್ಯಾಯವಾದಿ ಶ್ರೀ ಸುಬ್ರಹ್ಮಣ್ಯ ಅಗರ್ತ, ನ್ಯಾಯವಾದಿಗಳು ಬೆಳ್ತಂಗಡಿ, ಶ್ರೀ ಗುರುಪ್ರಸಾದ ಗೌಡ, ಕರ್ನಾಟಕ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ ಇವರು ಭಾಗವಹಿಸಲಿದ್ದಾರೆ. ಆದ್ದರಿಂದ ಎಲ್ಲಾ ಹಿಂದೂ ಬಂಧುಗಳು ಕಾರ್ಯಕ್ರಮದಲ್ಲಿ ಸಕುಂಬಿತರಾಗಿ ಉಪಸ್ಥಿತರಿರಬೇಕೆಂದು ವಿನಂತಿಸುತ್ತಿದ್ದೇವೆ, ಎಂದರು.

ಪತ್ರಿಕಾ ಪರಿಷತ್ ನಲ್ಲಿ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮಧುಸೂದನ್ ಅಯ್ಯರ್, ಉದ್ಯಮಿ ಶ್ರೀ ಸತೀಶ ಕಿಣಿ ಉಪಸ್ಥಿತರಿದ್ದರು.