ನಗರದ ಜಿಲ್ ಗೇವಿನ್ ಡಿಸೋಜ, ಯುವ ಡಿಜೆ ಸಂಗೀತಗಾರ ಆತ್ಮಹತ್ಯೆ

11:18 AM, Saturday, November 11th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

jill gavin D souza ಮಂಗಳೂರು:ಬೆಂದೂರ್‌ವೆಲ್‌ನ ಮನೆಯಲ್ಲಿ ನಗರದ ಯುವ ಡಿಜೆ ಸಂಗೀತಗಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂದೂರ್‌ವೆಲ್‌ ನಿವಾಸಿ ಜೊಸ್ಸಿ ಹಾಗೂ ಜುಲೈಟ್ ಎಂಬವರ ಮಗ ಜಿಲ್ ಗೇವಿನ್ ಡಿಸೋಜ (23) ಆತ್ಮಹತ್ಯೆಗೆ ಶರಣಾದವರು. ಜಿಲ್ ಗೇವಿನ್ ಡಿಜೆ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದರು. ಅಲ್ಲದೆ ಡ್ರಮ್ಮರ್ ಕೂಡಾ ಆಗಿದ್ದರು.

ಸುಮಾರು 9 ತಿಂಗಳಿನಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮನೆಯ ಮೊದಲ ಮಹಡಿಯಿಂದ ಎರಡನೇ ಮಹಡಿಗೆ ಹೋಗುವ ಮೆಟ್ಟಿಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜೊಸ್ಸಿಯವರು ಮನೆಯ ಮಹಡಿಗೆ ತೆರಳಿದಾಗ ಜಿಲ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English