ಡಾ. ಸಾಂಬಯ್ಯ ಅವರಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ

3:29 PM, Friday, November 17th, 2017
Share
1 Star2 Stars3 Stars4 Stars5 Stars
(No Ratings Yet)
Loading...

Alvas danvantari ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ವಿದ್ಯಾಗಿರಿಯಲ್ಲಿ ಗುರುವಾರ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ ಸಮಾರಂಭ ನಡೆಯಿತು.

ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ , ಆಯುರ್ವೇದ ಚಿಕಿತ್ಸಕ ಡಾ. ಸಾಂಬಯ್ಯ ಅವರಿಗೆ `ಆಳ್ವಾಸ್ ಧನ್ವಂತರಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‍ನ ಟ್ರಸ್ಟಿ ವಿವೇಕ ಆಳ್ವ ಅಧ್ಯಕ್ಷತೆವಹಿಸಿದ್ದರು.

ಮಂಗಳೂರು ಆಯುಷ್ ಫೌಂಡೇಶನ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸಂವಹನ ಗುಣ ಬೆಳೆಸಿಕೊಳ್ಳುವುದು ಅವಶ್ಯ. ಆಯುರ್ವೇದದಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ಜ್ಞಾನಶಕ್ತಿಯ ಆರೋಗ್ಯವೂ ಮುಖ್ಯ ಎಂದರು.

ನವದೆಹಲಿ ಸಿಸಿಐಎಂ ಸದಸ್ಯ, ಹುಬ್ಬಳ್ಳಿಯ ಆಯುರ್ವೇದ ಪ್ರಾಧ್ಯಾಪಕ ಅಡೂರು ಮೂಲದ ಡಾ. ಪ್ರಶಾಂತ್ ಎ.ಎಸ್. ಮುಖ್ಯ ಅತಿಥಿಯಾಗಿದ್ದರು.

ಜೀವಕ , ಆಯುರ್‍ವಿಶಾರದ ಪ್ರಶಸ್ತಿ :

ಹಿಮಾಲಯ ಡ್ರಗ್ ಕಂಪೆನಿ ನೀಡುವ ಜೀವಕ ಪ್ರಶಸ್ತಿ (ರೂ. 15,000)ವನ್ನು ಡಾ. ರಿಯಾ ಅವರಿಗೆ, ಆಯುರ್‍ವಿಶಾರದ ಪ್ರಶಸ್ತಿ (ರೂ. 10,000)ಯನ್ನು ಡಾ. ಶಿಫಾ ಶೆಟ್ಟಿ ಅವರಿಗೆ ಪ್ರದಾನ ಮಾಡಿ ಸಮ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ವಿನಯಚಂದ್ರಶೆಟ್ಟಿ ಸ್ವಾಗತಿಸಿದರು. ಡಾ. ಕೃಷ್ಣಮೂರ್ತಿ ಎಂ. ಎಸ್. ಸಮ್ಮಾನ ಪತ್ರ ವಾಚಿಸಿದರು. ಡಾ. ಸುಬ್ರಹ್ಮಣ್ಯಭಟ್ ಪದ್ಯಾಣ ವಂದಿಸಿದರು. ಡಾ. ರೋಹಿಣಿ ನಿರೂಪಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅಲಂಗಾರು ವೇ. ಮೂ. ಈಶ್ವರ ಭಟ್ ಮತ್ತು ಮಕ್ಕಳು ಧನ್ವಂತರಿ ಪೂಜಾ ಮಹೋತ್ಸವ ನೆರವೇರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English