ಮಾನಸಿಕ ಆರೋಗ್ಯದ ಅರಿವು ಮತ್ತು ನೇತ್ರದಾನದ ಮಾಹಿತಿ ಕಾರ್ಯಕ್ರಮ

8:53 PM, Friday, November 24th, 2017
Share
1 Star2 Stars3 Stars4 Stars5 Stars
(No Ratings Yet)
Loading...

eye donationಮಂಗಳೂರು :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಾದ ಡಾ.ರಾಮಕೃಷ್ಣ ರಾವ್ ಇವರ ಅಧ್ಯಕ್ಷತೆಯಲ್ಲಿ  ದಿನಾಂಕ 24-11-2017ರಂದು ಬೆಳಗ್ಗೆ 11.30 ಗಂಟೆಗೆ ಪತ್ರಿಕಾ ಸಂಭಾಗಣದಲ್ಲಿ  ಮಾನಸಿಕ ಆರೋಗ್ಯದ ಅರಿವು ಮತ್ತು ನೇತ್ರದಾನದ ಮಾಹಿತಿ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಎಂ.ಆರ್ ರವಿಯವರು ನೇತ್ರದಾನ ನೋಂದಾವಣಿ ಪ್ರತಿಯನ್ನು ಸ್ವೀಕರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈಗಾಗಲೇ 7670 ನೇತ್ರದಾನಿಗಳನ್ನು ಗುರುತಿಸಿದ್ದು,ಡಿಸೆಂಬರ್ ಒಳಗಡೆ 10,000 ನೇತ್ರದಾನಿಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ ಎಂದರು ಮತ್ತು ತಾಳ್ಮೆ,ಸಹಿಷ್ಣುತೆಯ ಗುಣವನ್ನು ರೂಢಿಸಿಕೊಂಡಾಗ ಮನಸ್ಸು ಏಕಾಗ್ರತೆ ಪಡೆದುಕೊಳ್ಳುತ್ತದೆ.ಮಾನಸಿಕ ಸಮತೋಲನಕ್ಕೂ ಇದೇ ಕಾರಣವಾಗುತ್ತದೆ. ಮಾನಸಿಕವಾಗಿ ಮನುಷ್ಯ ದೃಢತೆ ಕಾಯ್ದುಕೊಂಡಾಗ ಜೀವನವೂ ಸುಸೂತ್ರವಾಗುತ್ತದೆ.ನೆಮ್ಮದಿ ನಮ್ಮಲ್ಲೆ ಇದೆ.ಮನಸ್ಸು ಎನ್ನುವುದು ಎಲ್ಲವೂ ಆಗಿದೆ.ಭಾವನೆಗಳ ನಿರ್ವಹಣೆಯಲ್ಲಿ ನಾವು ವಿಫಲವಾದರೆ ಮಾನಸಿಕ ಅಸಮತೋಲನ ಶುರುವಾಗುತ್ತದೆ. ನಿರೀಕ್ಷೆಗಳ ಜೊತೆ ಬದುಕುವ ಬದಲು ಸವಾಲುಗಳ ಜೊತೆ ಬದುಕಬೇಕು.ಕಾರ್ಯನಿರತ ಪತ್ರಕರ್ತರಲ್ಲಿಯೂ ಮಾನಸಿಕ ಒತ್ತಡಗಳು ಇರುವುದನ್ನು ಅರಿವು ಮಾಡಿಕೊಳ್ಳಬೇಕು ಮತ್ತು ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳಬೇಕು ಎಂದು ಹೇಳಿದರು.

eye donationಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಾದ ಡಾ.ರಾಮಕೃಷ್ಣ ರಾವ್‍ರವರು ಸಮಾರಂಭದ ಅಧ್ಯಕ್ಷತೆ ವಹಿಸಿ ನೇತ್ರದಾನದ ಮಹತ್ವ,ವಿಧಾನಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಜಿಲ್ಲಾ ಮನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಮಾನಸಿಕ ರೋಗಿಗಳ ಕುರಿತಾದ ಚಿಕಿತ್ಸಾ ಸೌಲಭ್ಯಗಳ ಲಭ್ಯತೆಯನ್ನು ವಿವರಿಸಿದರು ಹಾಗೂ ದೀರ್ಘಕಾಲದಿಂದ ಮಾನಸಿಕ ರೋಗಿಗಳಿಂದ ಬಳಲುತ್ತಿರುವ ರೋಗಿಗಳ ಪುನಶ್ಚೇತಸ್ನಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಕೈಗೊಂಡ ಮಾನಾಸಾಧಾರ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಜಗನ್ನಾಥ್ ಶೆಟ್ಟಿಯವರು ಮಾತನಾಡುತ್ತಾ ವೃತ್ತಿಯಲ್ಲಿರುವ ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರ ದಿನಚರಿಯಲ್ಲಿ ಹಲವು ರೀತಿಯ ಒತ್ತಡಗಳು ಇದ್ದರೂ,ನಿರ್ವಹಣೆ ಮಾಡಿ ಕರ್ತವ್ಯವನ್ನು ನಿರ್ವಹಿಸುವಂತೆ ಕೋರಿದರು ಮತ್ತು ಸಮಾಜದಲ್ಲಿ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಅರಿವು ಮೂಡಿಸವ ಗುರುತರ ಜವಾಬ್ದಾರಿ ವೃತ್ತಿನಿರತ ಪತ್ರಕರ್ತರಲ್ಲಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಮನೋರೋಗ ತಜ್ಞರಾದ ಡಾ.ಶ್ರೀನಿವಾಸ್ ಭಟ್ ಇವರು ಮಾತನಾಡುತ್ತಾ ಮಾನಸಿಕ ಖಾಯಿಲೆಗಳ ಸ್ವರೂಪಗಳು,ಖಾಯಿಲೆಗಳ ಕಾನೂನ್ಮಾತಕ ಕ್ರಮ,ಸಾಮಾಜಿಕ,ಧಾರ್ಮಿಕ ಸಮಸ್ಯೆಗಳನ್ನು ತಮ್ಮ ಅನುಭವದ ನಿದರ್ಶನಗಳಿಂದ ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಯವರಾದ ಡಾ.ರತ್ನಾಕರ್ ಇವರು ಕಾರ್ಯಕ್ರಮ ಸಂಯೋಜಕರಾಗಿ ವೇದಿಕೆ ಅಲಂಕರಿಸಿ ಶುಭ ಕೋರಿದರು.ಪತ್ರಕರ್ತ ಮತ್ತು ಮಾದ್ಯಮದ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನಸಿಕ ಆರೋಗ್ಯದ ಅರಿವು ಮತ್ತು ನೇತ್ರದಾನದ ಬಗ್ಗೆ ಮಾಹಿತಿ ಪಡೆದುಕೊಂಡರು. ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ ಶ್ರೀ.ಜಯರಾಮ್ ಪೂಜಾರಿ ಹಿರಿಯ ಆರೋಗ್ಯ ಸಹಾಯಕರು ಜಿಲ್ಲಾ ಮಲೇರಿಯಾ ನಿಯಂತ್ರಣ ಕಚೇರಿ ದಕ ಮಂಗಳೂರು ಇವರು ವಂದನಾರ್ಪಣೆ ಸಮರ್ಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English