- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಒಂದಕ್ಕೊಂದು ಪೂರಕ: ಡಾ.ಡಿ. ಎಸ್. ಚೌಗಲೆ

Dr-D-S-Chaugale [1]ಮೂಡುಬಿದಿರೆ : ಚಿತ್ರಕಲೆ-ಪ್ರದರ್ಶನಕಲೆ-ರಂಗಭೂಮಿ ವಿಷಯದ ಕುರಿತು ಗಾಂಧಿ ವೆರ‍್ಸಸ್ ಗಾಂಧಿ ನಾಟಕ ಖ್ಯಾತಿಯ ರಂಗಕರ್ಮಿ ಡಾ.ಡಿ. ಎಸ್. ಚೌಗಲೆ ವಿಶೇಷೋಪನ್ಯಸ ನೀಡಿದರು.

ಕಲೆ ಮನುಷ್ಯನ ಮೂಲ ಸ್ವಭಾವಗಳಲ್ಲೊಂದು ಜಾತಿ, ಮತ ಮಿಕ್ಕೆಲ್ಲ ಭೇದ ಭಾವಗಳನ್ನು ಮೀರಿ ಬೆಳೆಯುವ ಶಕ್ತಿ ಹೊಂದಿರುವಂಥದ್ದು. ಕಲೆಯ ಮೂರು ವಿಭಿನ್ನ ವಿಭಾಗಗಳಾದ ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಇವುಗಳು ಒಂದಕ್ಕೊಂದು ಪೂರಕ ಎಂದು ಪ್ರತಿಪಾದಿಸಿದರು.

ಮೂರು ವಿಷಯಗಳನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತ ಚೌಗಲೆ, ಪ್ರದರ್ಶನ ಕಲೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಒಂದು ಪ್ರಕಾರ. ಇದು ಸಂಪೂರ್ಣ ಸೃಷ್ಟಿಕಾರನ ಪ್ರಸ್ತುತ ವಿದ್ಯಮಾನಗಳ ಕುರಿತ ಜ್ಞಾನದ ಮೇಲೆ ಅವಲಂಬಿತವಾಗಿದೆ. ಇನ್ನು ಚಿತ್ರಕಲೆಯು ಮನುಷ್ಯನ ಅನಾದಿಕಾಲದಿಂದಲೂ ಅವನ ಒಡನಾಡಿಯಂತೆ ಬೆಳೆದಿದೆ ಮತ್ತು ಸೃಷ್ಟಿಕಾರನ ಸೃಜನಶೀಲತೆಯೇ ಇದಕ್ಕೆ ಅಡಿಪಾಯ. ರಂಗಭೂಮಿ ಇವೆರಡಕ್ಕೂ ಮೀರಿದ ಮಟ್ಟದಲ್ಲಿ ಜನರಿಗೆ ತಲುಪುವುದರಿಂದ ಹೆಚ್ಚು ಸಾಮಾಜಿಕ ಹೊಣೆಯನ್ನು ಹೊಂದಿದೆ. ನಾಟಕದ ನಿರ್ದೇಶಕನು ಕಾಲಕ್ಕನುಗುಣವಾಗಿ ಲೇಖಕ ಹೇಳಹೊರಟಿರುವುದನ್ನೂ ಹೇಳಿ, ತನ್ನ ಕಲ್ಪನೆಗೂ ಸ್ಥಾನ ಕೊಟ್ಟಾಗ ಪ್ರಸ್ತುತತೆಗೆ ನ್ಯಾಯ ಒದಗಿಸಿದಂತೆ ಎಂದು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ನುಡಿಸಿರಿ-17 ರ ಅಧ್ಯಕ್ಷ ನಾಗತಿಹಳಿಶ್ಳಾ ಚಂದ್ರಶೇಖರ್, ಸಾಹಿತಿ ನಾ.ದಾ ಶೆಟ್ಟಿ ಉಪಸ್ಥಿತರಿದ್ದರು.