- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹಿಳೆಯರ ಭದ್ರತೆಯ ಬಗ್ಗೆ ಪುಸ್ತಕ ಬರೆದ ಯಜ್ಞೇಶ್ ಶೆಟ್ಟಿ

yajnesh-shetty [1]

ಮಂಗಳೂರು: ಮಹಿಳೆಯರ ಭದ್ರತೆಯ ಬಗ್ಗೆ ಖ್ಯಾತ ಮಾರ್ಷಲ್ ಆರ್ಟ್ಸ್ ತರಬೇತುದಾರರಾದ ಚೀತ ಯಜ್ಞೇಶ್ ಶೆಟ್ಟಿ ಪುಸ್ತಕವೊಂದನ್ನು ಬರೆದಿದ್ದಾರೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಮಹಿಳೆ ತನ್ನನ್ನು ತಾನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ `ವುಮೆನ್ ಸೇಫ್ಟಿ’ ಪುಸ್ತಕದಲ್ಲಿ ತಿಳಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ ಯಜ್ಞೇಶ್ ಶೆಟ್ಟಿ, ಮುಂಬೈ ಹಾಗೂ ಬ್ಯಾಂಕಾಕ್‌‌ನಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ. ದೇಶಾದ್ಯಂತ ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರಗಳನ್ನು ತೆರೆದಿರುವ ಯಜ್ಞೇಶ್, ಲೈಂಗಿಕ ಕಿರುಕುಳ ಸೇರಿದಂತೆ ಅನೇಕ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಮಹಿಳೆಯರು ಮಾರ್ಷಲ್ ಆರ್ಟ್ಸ್ ಕಲಿಯುವುದು ಅತ್ಯಂತ ಉಪಯುಕ್ತ. ಶಾಲಾ ಪಠ್ಯ ಪುಸ್ತಕಗಳಲ್ಲಿ ಮಹಿಳೆಯ ಸ್ವರಕ್ಷಣೆಯ ಕುರಿತು ಯಾವುದೇ ಪಾಠಗಳಿಲ್ಲ. ಆದ್ದರಿಂದ ಈ ಪುಸ್ತಕ ಹೆಚ್ಚು ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಹಾಂಕಾಂಗ್, ಚೈನಾ, ಜಪಾನ್ ಸೇರಿದಂತೆ 16 ದೇಶಗಳಲ್ಲಿ ಚೀತ್ ಮಾರ್ಷಲ್ ಆರ್ಟ್ಸ್ ಕೇಂದ್ರಗಳು ತರಬೇತಿಯನ್ನು ನೀಡುತ್ತಿವೆ. ಮಹಿಳೆಯರು ಸ್ವ ಆಸಕ್ತಿಯಿಂದ ಮಾರ್ಷಲ್ ಆರ್ಟ್ಸ್‌ನಲ್ಲಿ ತೊಡಗಿಸಿಕೊಳ್ಳಬೇಕು.

ಭಾರತದ ಯೋಗ, ಮಾರ್ಷಲ್ ಆರ್ಟ್ಸ್‌ನಂತಹ ಕಲೆಯನ್ನು ವಿದೇಶಗಳು ಅಳವಡಿಸಿಕೊಳ್ಳುತ್ತಿವೆ. ಈ ದೇಶದ ಯುವ ಸಮುದಾಯ ಇಂತಹ ಮಹತ್ವಪೂರ್ಣ ಕಲೆಯನ್ನು ಅಳವಡಿಸಿಕೊಳ್ಳಬೇಕು ಎಂದು ಚೀತ್ ಯಜ್ಞೇಶ್ ಶೆಟ್ಟಿ ಹೇಳಿದರು.