ಕೋಟೆಪುರದಲ್ಲಿ ತಂಡದಿಂದ ದಾಂಧಲೆ: ಮನೆ, ಕ್ಲಬ್, ಲಾರಿ, ಬೈಕ್ ಗೆ ಹಾನಿ

11:48 AM, Thursday, December 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

ullalಮಂಗಳೂರು: ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಪುರ ಬಳಿ 20-25 ದುಷ್ಕರ್ಮಿಗಳಿದ್ದ ತಂಡವೊಂದು ಮೀನಿನ ಲಾರಿ, ಬೈಕ್‌ನ್ನು ಪುಡಿಗೈದಿದ್ದಲ್ಲದೆ, ಕ್ಲಬ್ ಕಟ್ಟಡದ ಕಿಟಕಿ ಗಾಜುಗಳನ್ನು ಪುಡಿಗೈದು ಮನೆಯ ಹಂಚಿಗೆ ಕಲ್ಲೆಸೆದು ದಾಂಧಲೆ ನಡೆಸಿರುವ ಘಟನೆ ರವಿವಾರ ತಡರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ullal-2ಉಳ್ಳಾಲದ ಕೋಟೆಪುರ ಎಂಬಲ್ಲಿಯ ಸುಲ್ತಾನ್ ಸ್ಪೋಡ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಕಟ್ಟಡದ ಗಾಜುಗಳನ್ನು ತಂಡ ಪುಡಿಗೈದಿರುವುದಲ್ಲದೆ, ಸ್ಥಳದಲ್ಲೇ ನಿಲ್ಲಿಸಿದ್ದ ಮೀನಿನ ಲಾರಿಯ ಗಾಜು ಪುಡಿಗೈದು, ಬೈಕನ್ನು ಸಂಪೂರ್ಣ ಹಾನಿಗೈದು, ಫಾರುಕ್ ಎಂಬವರಿಗೆ ಸೇರಿದ ಮನೆಗೆ ಕಲ್ಲೆಸೆದು, ಬಸ್ಸು ನಿಲ್ದಾಣದ ನಾಮಫಲಕಕ್ಕೆ ಹಾನಿಗೊಳಿಸಿ ದಾಂಧಲೆ ನಡೆಸಿದ್ದಾರೆ ಎಂದು ತಿಳಿದ ಬಂದಿದೆ.

ತಂಡದಲ್ಲಿದ್ದ ಯುವಕರೆಲ್ಲರೂ ಕೋಡಿ ನಿವಾಸಿಗಳಾಗಿದ್ದು, ಈ ಪೈಕಿ ಹಲವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರು ಯುವಕರ ನಡುವೆ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿ ಜಗಳ ಆರಂಭಗೊಂಡಿದ್ದು, ಬಳಿಕ ನೆಪವಾಗಿಸಿಕೊಂಡು ತಂಡ ದಾಂಧಲೆ ನಡೆಸಿದೆ ಎಂದು ದೂರಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English