- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾವನಾ ಕಿರುಚಿತ್ರ ಸ್ಪರ್ಧೆ: ‘ಹೊಗೆಂ’ಗೆ ಪ್ರಥಮ ಪ್ರಶಸ್ತಿ

competition [1]ಬ್ರಹ್ಮಾವರ: ಹಾವಂಜೆ ಭಾವನಾ ಫೌಂಡೇಶನ್ ಹಾಗೂ ಭಾವನಾ ಕಲಾವಿದರು ಇದರ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಭಾವನಾ ಕಿರು ಚಿತ್ರ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಹಾಗೂ ಟ್ರಂಕ್ ಕನ್ನಡ ಚಲನಚಿತ್ರದ ವೀಡಿಯೋ ತುಣುಕಿನ ಬಿಡುಗಡೆ ಸಮಾರಂಭವು ಶನಿವಾರ ಮಹಾಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಭಾಸ್ಕರ್ ಗುಂಡಿಬೈಲು ಮೂಡುಸಗ್ರಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಭಹಾರೈಸಿದರು. ನಾಟಕ ಅಕಾಡೆಮಿಯ ಸದಸ್ಯ ಬಾುಮ ಕೊಡಗು ಮಾತ ನಾಡಿದರು.

ಭಾವನಾ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಥಮ ‘ಹೊಗೆಂ’, ದ್ವಿತೀಯ ‘ಸ್ಪೆಶಲ್ ಗಿ್‌ಟ’, ವೀಕ್ಷಕರ ಮೆಚ್ಚಿನ ಕಿರುಚಿತ್ರ ‘ಒಂಜಿ ಗಳಿಗೆ’, ಭಾವನಾ ಮೆಚ್ಚಿದ ಕಿರು ಚಿತ್ರ ‘ನೆರಳು’ ನಗದು ಪುರಸ್ಕಾರ ಮತ್ತು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಕ್ಲಿಂಗ್ ಜೋನ್ಸನ್(ಸ್ಪೆಶಲ್ ಗಿ್‌ಟ), ಉತ್ತಮ ಛಾಯಾಗ್ರಾಹಕ ಸುರೇಂದ್ರ ಪಣಿಯೂರು(ನಂದಾದೀಪ), ಉತ್ತಮ ಸಂಕಲನ ಗಾರ ಗಣೇಶ್ ಹೆಗ್ಡೆ(ಹೊಗೆಂ), ಉತ್ತಮ ಕಥೆ ಪ್ರದೀಪ್ ಪರಮೇಶ್ವರ್(ಒಂದು ಸಾರಿ), ಉತ್ತಮ ಚಿತ್ರಕಥೆ ಕ್ಲಿಂಗ್ ಜೋನ್ಸನ್(ಸ್ಪೆಶಲ್ ಗಿ್‌ಟ), ಉತ್ತಮ ಸಂಗೀತ ಗಿರಿಧರ್ ದಿವಾನ್(ಸ್ಫೆಶಲ್ ಗಿ್‌ಟ), ಉತ್ತಮ ವಿಶುವಲ್ ಇಫೆಕ್ಟ್ ಗಣೇಶ್ ಹೆಗ್ಡೆ(ಹೊಗೆಂ), ಉತ್ತಮ ಕಥಾನಾಯಕರಾಗಿ ಭಾಸ್ಕರ್ ಮಣಿಪಾಲ್(ಸ್ಪೆಶಲ್ ), ಕಥಾ ನಾಯಕಿಯಾಗಿ ನಿಖಿತಾ ಗಿರಿ(ಹೀಗೂ ಒಂದು ಲವ್ ಸ್ಟೋರಿ), ಪೋಷಕ ನಟರಾಗಿ ನಾರಾಯಣ ಭಂಡಾರಿ(ಒಂಜಿ ಗಳಿಗೆ), ಪೋಷಕ ನಟಿ ಯಾಗಿ ಲಕ್ಷ್ಮೀ(ನಂದಾದೀಪ), ಹಾಸ್ಯನಟರಾಗಿ ಇಡ್ಲಿ ರಾಜ(ಒಂದು ಕಥೆಯಲ್ಲಿ ಒಂದು ಮೊಟ್ಟೆ), ಬಾಲನಟರಾಗಿ ಸೋಹನ್(ಸ್ಪೆಶಲ್ ಗಿ್‌ಟ) ತೀರ್ಪುಗಾರರ ಮೆಚ್ಚಿನ ಕಥಾನಾಯಕರಾಗಿ ರಕ್ಷಿತ್ ಕುಮಾರ್(ಹೊಗೆಂ), ಮೆಚ್ಚಿನ ಬಾಲನಟ ರಾಗಿ ಸ್ವಸ್ತಿಕ್ ನಾಯಕ್(ನಂದಾದೀಪ) ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಪರ್ಧೆ ಯಲ್ಲಿ ಕರ್ನಾಟಕದ ಬೇರೆ ಬೇರೆ ಭಾಗದ 17ಕಿರುಚಿತ್ರಗಳು ಭಾಗವಹಿಸಿದ್ದುವು.

ಈ ಸಂದರ್ಭದಲ್ಲಿ ಕಲಾ ಸಿಂಧು ಪ್ರಶಸ್ತಿಯನ್ನು ರಂಗಭೂಮಿ ಮತ್ತು ಕಿರುತೆರೆ ನಟಿ ಸುಪ್ರೀತಾ ಶೆಟ್ಟಿ ಬೆಂಗಳೂರು, ಭಾವನಾ ಪುರಸ್ಕಾರವನ್ನು ಗಿನ್ನೆಸ್ ದಾಖಲೆ ಸಾಧಕ ಪ್ರಥ್ವೀಶ್ ಭಟ್ ಪೇತ್ರಿ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಪುರಸ್ಕೃತ ಮಹೇಶ್ ಬಿ.ಶೆಟ್ಟಿ ಹಾವಂಜೆ ಅವರನ್ನು ಗೌರವಿಸಲಾಯಿತು. ಐದೇ ನಿಮಿಷದಲ್ಲಿ ಕ್ಯೂಬ್ ಪಝಲ್‌ನಲ್ಲಿ ಆಕರ್ಷಕ ಭಾವಚಿತ್ರ ನಿರ್ಮಾಣ ಮಾಡಿ ಪ್ರಥ್ವೀಶ್ ಭಟ್ ಗಮನ ಸೆಳೆದರು.

ಮುಖ್ಯ ಅತಿಥಿಗಳಾಗಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಬಿ.ಶೆಟ್ಟಿ, ಚಲನಚಿತ್ರ ನಟ ಮಂಜುನಾಥ ಗೌಡ, ಟ್ರಂಕ್ ಚಲನ ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮ ಬೆಂಗಳೂರು, ಉದ್ಯಮಿಗಳಾದ ನವೀನ್ ಅಮೀನ್ ಶಂಕರಪುರ, ಇಮಿನೆಂಟ್ ಸ್ಟುಡಿಯೋಸ್‌ನ ನಿರ್ದೇಶಕ ಸುಕೇಶ್ ಆರ್.ಶೆಟ್ಟಿ, ಹಾವಂಜೆ ಗ್ರಾಪಂ ಅಧ್ಯಕ್ಷ ವಸಂತಿ ಶೆಟ್ಟಿ, ಭಾವನಾ ಫೌಂಡೇಶನ್‌ನ ಅಧ್ಯಕ್ಷ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಅಧ್ಯಕ್ಷತೆ ಯನ್ನು ರಂಗಭೂಮಿ ಕಲಾವಿದ ಪೆರ್ಡೂರ ರತ್ನಾಕರ ಕಲ್ಯಾಣಿ ವಹಿಸಿದ್ದರು.

ಭಾವನಾ ಕಲಾವಿದರು ತಂಡದ ಅಧ್ಯಕ್ಷ ಉದಯ್ ಕೋಟ್ಯಾನ್ ಸ್ವಾಗತಿಸಿ ದರು. ಕಲಾಶಾಲೆಯ ನಿರ್ದೇಶಕ ಜನಾರ್ದನ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಶಿಕ್ಷಕಿ ಅಕ್ಷತಾ ವಿ.ರಾವ್ ಸನ್ಮಾನ ಪತ್ರ ವಾಚಿಸಿ ದರು. ನಾಟಕ ನಿರ್ದೇಶಕ ವಿಶು ರಾವ್ ಹಾವಂಜೆ ವಂದಿಸಿದರು. ದಯಾನಂದ ಕರ್ಕೇರ ಉಗ್ಗೇಲ್ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.