ಖ್ಯಾತ ಮೂಳೆ ತಜ್ಞ ಡಾ. ಶಾಂತಾರಾಮ ಶೆಟ್ಟಿಗೆ ಕರಾವಳಿ ಗೌರವ ಪ್ರಶಸ್ತಿ

1:08 PM, Monday, January 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shantramಮಂಗಳೂರು: ನಗರದ ಖ್ಯಾತ ಮೂಳೆ ತಜ್ಙ ಡಾ. ಶಾಂತಾರಾಮ ಶೆಟ್ಟಿ ಅವರಿಗೆ ಈ ವರ್ಷದ ಕರಾವಳಿ ಗೌರವ ಪ್ರಶಸ್ತಿ ಒಲಿದಿದೆ.

1965ರಲ್ಲಿ ಮೈಸೂರಿನಲ್ಲಿ ವೈದ್ಯಕೀಯ ಪದವಿ ಮುಗಿಸಿದ ಅವರು, ಈಗಾಗಲೇ ಅಮೆರಿಕಾದ ಕಾಲೇಜ್‌ನ ಗೌರವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.

ರೆಡ್ ಕ್ರಾಸ್, ಲಯನ್ಸ್ ಸೇರಿದಂತೆ ಹತ್ತು ಹಲವು ಸಮಾಜ ಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಶಾಂತಾರಾಮ ಶೆಟ್ಟಿ ತೇಜಸ್ವಿನಿ ಆಸ್ಪತ್ರೆಯ ಸಂಸ್ಥಾಪಕರಾಗಿದ್ದಾರೆ.

shantram-22007ರಿಂದ 2011ರವರೆಗೆ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಯಾಗಿ ದಕ್ಷ ಸೇವೆ ಸಲ್ಲಿಸಿರುವ ಡಾ. ಶೆಟ್ಟಿ, ಅನೇಕ ಭಾರತೀಯ ವಿಶ್ವವಿದ್ಯಾನಿಲಯಗಳ ಸ್ನಾತಕೋತ್ತರ ಪರೀಕ್ಷಾ ವಿಭಾಗದ ಪರಿವೀಕ್ಷಕರಾಗಿ, ಅಮೆರಿಕಾ, ಇಂಗ್ಲೆಂಡ್, ಜರ್ಮನ್ ಸೇರಿದಂತೆ ದೇಶ-ವಿದೇಶಗಳ ಪ್ರಖ್ಯಾತ ವಿಶ್ವವಿದ್ಯಾನಿಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.

ಡಾ. ಶೆಟ್ಟಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರೋಟರಿಯ ವಂದನಾ ಪ್ರಶಸ್ತಿ, ಪ್ರೆಸ್ ಗರ್ವನರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English