ಉಡುಪಿ: ಉಡುಪಿ ರಂಗಭೂಮಿ ವತಿಯಿಂದ ಅಂಬಲಪಾಡಿ ದೇವಸ್ಥಾನದ ತೆರೆದ ರಂಗ ಮಂಟಪದಲ್ಲಿ ಆಯೋಜಿಸಲಾದ ಎರಡು ದಿನಗಳ ನೀನಾಸಂ ತಿರುಗಾಟದ ದಿ.ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ‘ಅಂಬಲ ಪಾಡಿ ನಾಟಕೋತ್ಸವ’ವನ್ನು ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ರವಿವಾರ ಉದ್ಘಾಟಿಸಿದರು.
ನಾಟಕ, ಯಕ್ಷಗಾನ ಕಲಾ ಪ್ರಕಾರಗಳನ್ನು ಅದರ ಮೂಲ ಸ್ವರೂಪದೊಂದಿಗೆ ಆಧುನಿಕತೆಗೆ ಅನುಗುಣವಾಗಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದರೆ ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾಟಕಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು. ರಂಗಸಜ್ಜಿಕೆ, ವಸವಿನ್ಯಾಸ, ತಾಂತ್ರಿಕತೆ, ಪಾತ್ರ ಇತ್ಯಾದಿಗಳಲ್ಲಿ ಹೊಸತನವನ್ನು ತರಬೇಕು ಎಂದು ವಿಜಯ ಬಲ್ಲಾಳ್ ತಿಳಿಸಿದರು.
ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತಾರಾಮ್, ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ನಂದಕುಮಾರ್, ಜತೆಕಾರ್ಯದರ್ಶಿ ರವಿರಾಜ್ ಎಚ್.ಪಿ., ಶ್ರೀಪಾದ್ ಹೆಗಡೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಭಾಸ್ಕರ್ ರಾವ್ ಕಿದಿುೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಭಾಸ ರಚನೆಯ ಸಾಲಿಯಾನ್ ಉಮೇಶ್ ನಾರಾಯಣ ನಿರ್ದೇಶನದ ನೀನಾಸಂ ತಿರುಗಾಟದ ನಾಟಕ ‘ಮಧ್ಯಮ ವ್ಯಾಯೋಗ’ ಪ್ರದರ್ಶನಗೊಂಡಿತು.
Click this button or press Ctrl+G to toggle between Kannada and English