ಅಮೆರಿಕನ್ ಹುಡುಗಿ ಜೊತೆ ಕರಾವಳಿ ಹುಡುಗನ ಮದುವೆ

12:04 AM, Wednesday, January 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Vikram Kamathಪುತ್ತೂರು  : ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ, ಈ ಮಾತು ಸಾಕಷ್ಟು ಬಾರಿ ಪ್ರೂವ್ ಕೂಡ ಆಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮದುವೆ ಸಾಕ್ಷಿ . ಅಪ್ಪಟ ದೇಶೀ ಹುಡುಗನಿಗೆ ವಿದೇಶೀ ಹುಡುಗಿ ಬಾಳ ಸಂಗಾತಿಯಾಗಿ ಸಿಕ್ಕಿದ್ದಾಳೆ. ಅಮೆರಿಕನ್ ಪ್ರಜೆಯಾಗಿರುವ ಕೆರೊಲಿನ್ ಮಾರ್ಗರೇಟ್ ರೋವ್ಲಿ, ವಿಕ್ರಮ್ ಕಾಮತ್ ನ ಪ್ರೀತಿಗೆ ಸಿಲುಕಿ ಏಳು ಸಾಗರ ದಾಟಿ ಪುತ್ತೂರಿನಲ್ಲಿ ಒಂದಾಗಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಈ ಜೋಡಿ ಮದುವೆ ವಿಶೇಷವಾಗಿತ್ತು. ಪುತ್ತೂರಿನ ಕಲ್ಲಾರೆಯ ಗೋಪಿನಾಥ್ ಶಣೈ ಅವರ ಮನೆಯಲ್ಲಿ ಈ ಮದುವೆ ನಡೆದಿದ್ದು, ಕೆರೊಲಿನ್ ನನ್ನು ಗೋಪಿನಾಥ್ ಶಣೈ ದತ್ತು ಸ್ವೀಕರಿಸುವ ಪ್ರಕ್ರಿಯೆ ಮೊದಲು ನಡೆದಿದೆ. ಬಳಿಕ ಗೋಪಿನಾಥ್ ಶಣೈ ಕರೊಲಿನ್ ನ ತಂದೆಯ ಸ್ಥಾನದಲ್ಲಿ ನಿಲ್ಲುವ ಮೂಲಕ ಆಕೆಯಲ್ಲಿ ವಿಕ್ರಮ ಕಾಮತ್ ಗೆ ಧಾರೆಯೆರೆದು ಕೊಟ್ಟಿದ್ದಾರೆ.

ಅತ್ಯಂತ ಸರಳ ರೀತಿಯಲ್ಲಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಕೆಲವೇ ಜನರಿಗೆ ಮಾತ್ರ ಆಮಂತ್ರಣವಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English