ನವದೆಹಲಿ: ಸೇನೆಯಲ್ಲಿ ಯೋಧರು ಪ್ರತೀದಿನ ಹುತಾತ್ಮರಾಗುತ್ತಿರುತ್ತಾರೆ, ಯೋಧರು ಹುತಾತ್ಮರಾಗದ ದೇಶ ಯಾವುದಾದರೂ ಇದೆಯೇ ಎಂದು ಉತ್ತರಪ್ರದೇಶದ ಬಿಜೆಪಿ ಸಂಸದ ನೇಪಾಳ್ ಸಿಂಗ್ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಪುಲ್ವಾಮದಲ್ಲಿ ಸಿಆರ್’ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವ ವೇಳೆ ನೇಪಾಳ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಸೇನೆಯಲ್ಲಿ ಯೋಧರು ಪ್ರತೀನಿತ್ಯ ಹುತಾತ್ಮರಾಗುತ್ತಿರುತ್ತಾರೆ. ಯೋಧರು ಹುತಾತ್ಮರಾಗದೇ ಇರುವ ದೇಶ ಯಾವುದಾದರೂ ಇದೆಯೇ? ಗ್ರಾಮದಲ್ಲಿ ಮಾರಮಾರಿಯಾದಾಗ ಒಬ್ಬರಲ್ಲ ಒಬ್ಬರು ಗಾಯಗೊಳ್ಳುತ್ತಾರೆ. ಜೀವವನ್ನು ರಕ್ಷಣೆ ಮಾಡುವ ಯಾವದಾದರೂ ಉಪಕರಣ ಇದೆಯೇ? ಗುಂಡುಗಳನ್ನು ಪರಿಣಾಮಕಾರಿಯಾಗದೆ ಮಾಡುವ ಯಾವುದಾದರೂ ಉಪಕರಣವಿದ್ದರೆ ಸೂಚಿಸಿ ಅದನ್ನು ನಾವು ಅನುಷ್ಠಾನಕ್ಕೆ ತರುತ್ತೇವೆಂದು ತಿಳಿಸಿದ್ದಾರೆ.
ನೇಪಾಳ್ ಸಿಂಗ್ ಅವರ ಈ ಹೇಳಿಕೆಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಿರುವ ಅವರು, ಯೋಧರಿಗೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ನಾನು ಈ ರೀತಿಯ ಹೇಳಿಕೆಯನ್ನು ನೀಡಿಲ್ಲ. ದೇಶ ಕಾಯುವ ಯೋಧರ ಜೀವ ರಕ್ಷಣೆ ಮಾಡುವ ಉಪಕರಣಗಳನ್ನು ಪರಿಚಯಿಸಲು ವಿಜ್ಞಾನಿಗಳು ಯತ್ನ ನಡೆಸುತ್ತಿರುತ್ತಾರೆಂಬ ಅರ್ಥದಲ್ಲಿ ಹೇಳಿಕೆಯನ್ನು ನೀಡಿದ್ದೆ ಎಂದಿದ್ದಾರೆ.
Click this button or press Ctrl+G to toggle between Kannada and English