- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದರ್ಶನ್ ಕುಡಿದು ಬಂದು ಹಲ್ಲೆ ಮಾಡಿದರಲ್ಲದೆ, ಮಗುವಿನ ಮೇಲೆ ಸಂಶಯ ಪಟ್ಟರು

Darshan-Vijayalakshmi [1]

ಬೆಂಗಳೂರು: ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪರಪ್ಪನ ಅಗ್ರಹಾರದ ಕೈದಿಯಾಗಿದ್ದಾರೆ. ಈ ಪ್ರಕರಣ ದರ್ಶನ್ ಸಿನಿಮಾ ಲೈಫಿಗೆ ಮಾರಕ ಆಗಲಿದೆಯೇ ಎಂಬ ಸಂದೇಹ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಕನ್ನಡ ಚಿತ್ರರಂಗದ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರಿಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಅವರಿಂದಲೇ ನಟಿ ನಿಖಿತಾ ಪರಿಯಚಯವಾಗಿದ್ದು ಎಂದು ಗಾಂಧೀ ನಗರದ ಜನ ಹೇಳುತ್ತಿದ್ದಾರೆ.

ಇಷ್ಟು ದಿನ ಬೆಳ್ಳಿ ತೆರೆಯ ಮೇಲೆ ದರ್ಶನ್ ಅವರ ಡೈಲಾಗ್‌ಗಳನ್ನು ಕೇಳಿ ಶಿಳ್ಳೆ ಹೊಡೆಯುತ್ತಿದ್ದ ಅಭಿಮಾನಿಗಳು ಇನ್ನು ಮುಂದೆ ಅವರ ಚಿತ್ರಗಳನ್ನು ಸ್ವೀಕರಿಸುತ್ತಾರಾ. ದರ್ಶನ್ ಒಂದು ವೇಳೆ ನಿರಪರಾಧಿ ಎಂದು ಹೊರಬಂದರೂ ಈಗಾಗಲೆ ಅವರ ‘ಕ್ರೌರ್ಯ’ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಇಷ್ಟೆಲ್ಲಾ ನೋಡಿದ ಮೇಲೂ ದರ್ಶನ್ ಅವರ ಚಿತ್ರಗಳನ್ನು ಅವರ ಅಭಿಮಾನಿಗಳು ಮುಂದೆ ಸಹಿಸುತ್ತಾರಾ? ಇಲ್ಲಿಗೆ ದರ್ಶನ್ ಕತೆ ಮುಗಿಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಾಲವೇ ಹೇಳಲಿದೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಬೆಂಗಳೂರಿನ ವಿಜಯನಗರ ಪೊಲೀಸರಿಗೆ ದರ್ಶನ್‌ ವಿರುದ್ಧ ಗುರುವಾರ ದೂರು ನೀಡಿದ್ದರು. ದೂರಿನಲ್ಲಿ ದರ್ಶನ್‌ ಪತ್ನಿಯಾದ ನಾನು, ಅವರನ್ನು ಪ್ರೀತಿಸಿ 2003ರಲ್ಲಿ ಧರ್ಮಸ್ಥಳದಲ್ಲಿ ಹಿಂದೂ ಸಂಪ್ರದಾಯ ಪ್ರಕಾರ ಮದುವೆಯಾದೆವು. ನಂತರ ನಾವು ಬಿಟಿಎಂ ಲೇಔಟ್‌ನ ಮನೆಯಲ್ಲಿ ವಾಸವಾಗಿದ್ದೆವು. 2008ರಲ್ಲಿ ನಮಗೆ ಗಂಡು ಮಗುವಾಯಿತು. ಆ ಸಮಯದಲ್ಲಿ ಅವರು ಒಂದಷ್ಟು ಆಸ್ತಿಯನ್ನು ನನ್ನ ಹೆಸರಿಗೆ ನೋಂದಾಯಿಸಿದ್ದರು. ನಂತರ ನಾವು ರಾಜರಾಜೇಶ್ವರಿ ನಗರದ ಮನೆಗೆ ಹೋದೆವು.

ಕಳೆದ ಒಂದು ತಿಂಗಳಿನಿಂದ ನಾನು ಮುನೇಶ್ವರ ಬ್ಲಾಕ್‌ನ ನನ್ನ ಅಮ್ಮನ ಮನೆಯಲ್ಲಿ ವಾಸವಾಗಿದ್ದೇನೆ. ಇತ್ತೀಚೆಗೆ ದರ್ಶನ್‌ ಕುಡಿದು ಬಂದು ನನಗೆ ಕಿರುಕುಳ ನೀಡುತ್ತಿದ್ದರು. ನನ್ನ ಹೆಸರಿಗೆ ಬರೆದುಕೊಟ್ಟ ಆಸ್ತಿಯನ್ನು ವಾಪಸ್‌ ಅವರ ಹೆಸರಿಗೆ ಬರೆದುಕೊಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ.

‘ಪೊರ್ಕಿ’ ಚಿತ್ರೀಕರಣದ ಸಮಯದಲ್ಲಿ ಅವರು ನನ್ನನ್ನು ಸ್ವಿಜರ್ಲೆಂಡ್‌ಗೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಅವರು ಅಲ್ಲಿ ಹುಡುಗಿಯರ ಜೊತೆ ವರ್ತಿಸಿದ್ದನ್ನು ಕಂಡು ನಾನು ಬೈದಾಗ ‘ನಿನ್ನನ್ನು ಮತ್ತು ಮಗುವನ್ನು ಇಲ್ಲಿಂದಲೇ ಕಿಟಕಿಯಿಂದ ಹೊರಗೆ ಹಾಕುತ್ತೇನೆ’ ಎಂದು ಹೇಳಿದರು. ಆಗ ಅವರು ತುಂಬಾ ಬದಲಾಗಿದ್ದಾರೆಂದು ಗೊತ್ತಾಯಿತು. ನಂತರ ನಟಿ ನಿಖೀತಾ ವಿಷಯದಲ್ಲೂ ನಮ್ಮಿಬ್ಬರ ನಡುವೆ ಜಗಳವಾಗಿತ್ತು.

ಆದರೆ, ಗುರುವಾರ ಪಾನಮತ್ತರಾಗಿ ಬಂದ ಅವರು ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಲ್ಲದೇ, ಮಗ ವಿನೀಶ್‌ನನ್ನು ಎತ್ತಿ ‘ನೀನು ಅವಳ ಹೊಟ್ಟೆಯಲ್ಲಿ ಹುಟ್ಟಿದ್ದೀಯಾ’ ಎಂದು ಕುತ್ತಿಗೆಯಲ್ಲಿ ಹಿಡಿದು ಎತ್ತಿದರು. ಆಗ ಪಕ್ಕದ ಮನೆಯವರು ಬಂದು ಬಿಡಿಸಿದರು. ತಾವು ದರ್ಶನ್‌ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ದೂರು ನೀಡಿದ್ದಾರೆ.

ನನ್ನ ಮಗನಿಗೆ ಇನ್ನೋವಾ ಕಾರಿನಲ್ಲಿ ಸುತ್ತಾಡುವುದೆಂದರೆ ತುಂಬಾ ಇಷ್ಟ. ಆದಕ್ಕಾಗಿ ಮಗನನ್ನು ಕಳುಹಿಸಿಕೊಡುವಂತೆ ಪತ್ನಿಯನ್ನು ಕೇಳಿದಾಗ ಆಕೆ ನಿರಾಕರಿಸಿದಳು. ಆಗ ನನಗೂ ಅವಳಿಗೂ ಜಗಳವಾಗಿ ನಾನು ಆಕೆಯ ಮೇಲೆ ಹಲ್ಲೆ ಮಾಡಿದೆ. ಆಗ ಅವಳು ಕೆಳಗೆ ಬಿದ್ದಳು. ಆದರೆ ನಾನು ರಿವಾಲ್ವಾರ್‌ ತೋರಿಸಿ ಬೆದರಿಸಿಲ್ಲ. ಘಟನೆ ನಡೆದಾಗ ನಾನು ಮದ್ಯಪಾನ ಮಾಡಿದ್ದೆ. ನಂತರ ಏನಾಯಿತೋ ಗೊತ್ತಾಗಲಿಲ್ಲ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.

ಇಂದು ಬೆಳಗ್ಗೆ ಹೇಳಿಕೆ ಬಳಿಸಿದ ವಿಜಯಲಕ್ಷ್ಮೀ

ದರ್ಶನ್‌ ತಮ್ಮ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನುವುದರ ಜೊತೆಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಶುಕ್ತವಾರ ಸಂಜೆ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾರೆ. ತಮಗಾಗಿರುವ ಗಾಯಗಳು ದರ್ಶನ್‌ ಹೊಡೆದಿದ್ದರಿಂದ ಆಗಿಲ್ಲ, ತಾವೇ ಟಾಯ್ಲೆಟ್‌ನಲ್ಲಿ ಬಿದ್ದಿದ್ದರಿಂದ ಆಗಿದ್ದು ಎಂದು ಹೇಳುವ ಮೂಲಕ, ಇಡೀ ಪ್ರಕರಣವನ್ನು ಇನ್ನೊಂದು ದಿಕ್ಕಿಗೆ ತಿರುಗಿಸಿದ್ದಾರೆ.

ವಿಜಯಲಕ್ಷ್ಮೀ ಇದ್ದಕ್ಕಿದ್ದಂತೆ ತಮ್ಮ ಹೇಳಿಕೆಯನ್ನು ಬದಲಿಸಿದ್ದಕ್ಕೆ ಕಾರಣ ಅವರ ಮೇಲಿನ ಒತ್ತಡ ಎಂದು ಹೇಳಲಾಗುತ್ತಿದೆ. ಯಾವಾಗ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿಟ್ಟರೋ, ಯಾವಾಗ ಇಡೀ ಪ್ರಕರಣ ಮಾಧ್ಯಮಗಳಲ್ಲಿ ರಾರಾಜಿಸಿತೋ, ಆಗ ಚಿತ್ರರಂಗದ ಕೆಲವರು ವಿಜಯಲಕ್ಷ್ಮೀ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾತನಾಡಿದ್ದಾರೆ. ವಿಜಯಲಕ್ಷ್ಮೀ ಹೇಳಿಕೆಯಿಂದಾಗಿ ದರ್ಶನ್‌ಗೆ ತೊಂದರೆಯಾಗುವುದಷ್ಟೇ ಅಲ್ಲ, ಅವರ ಇಮೇಜ್‌ಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರರಂಗದ ಹಲವರು ವಿಜಯಲಕ್ಷ್ಮೀ ಅವರ ಮೇಲೆ ಒತ್ತಡ ಹೇರಿದ್ದಾರೆ. ಅದಕ್ಕೆ ಸರಿಯಾಗಿ ವಿಜಯಲಕ್ಷ್ಮೀ ಸಹ ಬಚ್ಚಲುಮನೆಯಲ್ಲಿ ಬಿದ್ದ ಕಥೆ ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ದರ್ಶನ್‌ ಪರವಾಗಿ ರಾಜಿ ಸಂಧಾನಕ್ಕೆ ಬಂದ ಕನ್ನಡ ಚಿತ್ರರಂಗದ ಹಿರಿಯರ ಮುಂದೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಪ್ರಮುಖ ನಾಲ್ಕು ಷರತ್ತುಗಳನ್ನು ಮುಂದಿಟ್ಟಿದ್ದರು.

ಈ ನಾಲ್ಕು ಷರತ್ತುಗಳಿಗೆ ನಟ ದರ್ಶನ್‌ ಒಪ್ಪಿಗೆ ಸೂಚಿಸಿದ್ದಾರೆಂದು ಅಂಬರೀಷ್‌, ನಟ ದುನಿಯಾ ವಿಜಯ್‌, ಪ್ರೇಮ್‌, ಜಗ್ಗೇಶ್‌ ಹಾಗೂ ಬುಲೆಟ್‌ ಪ್ರಕಾಶ್‌ ಅವರು ಭರವಸೆ ನೀಡಿದ ಬಳಿಕವಷ್ಟೆ ದರ್ಶನ್‌ ವಿರುದ್ದ ಪೊಲೀಸರಿಗೆ ನೀಡಿದ್ದ ದೂರು ಹಿಂಪಡೆಯಲು ವಿಜಯಲಕ್ಷ್ಮೀ ಸಮ್ಮತಿ ಸೂಚಿಸಿದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಜಯಲಕ್ಷ್ಮೀಯ ನಾಲ್ಕು ಷರತ್ತು 1.ತಾಯಿ ಮನೆಗೆ ಹೋಗಲು ನಿರ್ಬಂಧವಿರಬಾರದು 2. ದರ್ಶನ್‌ ತಮ್ಮ ಕುರಿತು ಹರಡಿರುವ ಗಾಸಿಪ್‌ಗ್ಳಿಗೆ ಸ್ಪಷ್ಟನೆ ನೀಡಬೇಕು
3. ರಿವಾಲ್ವಾರ್‌ ಬಳಸಬಾರದು, ಮದ್ಯ ಸೇವಿಸಬಾರದು 4.ನನ್ನ ಮೇಲೆ ಕೈ ಎತ್ತಬಾರದು