- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾಳೆಯಿಂದ 7 ದಿನ ತುಳು ಫಿಲ್ಮ್ ಫೆಸ್ಟಿ ವಲ್‌

tulu-film-award [1]ಮಂಗಳೂರು: ತುಳುವಿನಲ್ಲಿ 1973ರಲ್ಲಿ ತೆರೆ ಕಂಡ 5ನೇ ಸಿನೆಮಾ ‘ಉಡಲ್ದ ತುಡರ್‌’ನಿಂದ ಆರಂಭವಾಗಿ ಕಳೆದ ನವೆಂಬರ್‌ನಲ್ಲಿ ತೆರೆಕಂಡ ತುಳುವಿನ 85ನೇ ‘ರಂಗ್‌ ರಂಗ್‌ದ ದಿಬ್ಬಣ’ ಸಿನೆಮಾದ ಪೈಕಿ ಒಟ್ಟು 49 ಸಿನೆಮಾಗಳ ಮಹಾನ್‌ ಪ್ರದರ್ಶನದ ‘ತುಳು ಫಿಲ್ಮ್ ಫೆಸ್ಟಿವಲ್‌’ಗೆ ಮಂಗಳೂರು ಸನ್ನದ್ಧವಾಗಿದೆ. ತುಳು ಚಲನಚಿತ್ರ ನಿರ್ಮಾಪಕರ ಸಂಘ ಆಯೋಜಿತ, ತುಳು ಚಿತ್ರರಂಗದ ಮೊದಲ ಚಿತ್ರ ಜಾತ್ರೆ ಜ.5ರಿಂದ 11ರ ವರೆಗೆ ಚಿತ್ರ ಪ್ರದರ್ಶನ-ಸಂವಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

49 ಸಿನೆಮಾಗಳ ಪೈಕಿ ಒಟ್ಟು 24 ಸಿನೆಮಾಗಳು ಸಿನೆಪೊಲಿಸ್‌ನಲ್ಲಿ ಪ್ರದರ್ಶನ ಕಾಣಲಿದೆ. ಉಳಿದಂತೆ, 25 ಹಳೆಯ ಸಿನೆಮಾಗಳನ್ನು ಪ್ರೊಜೆಕ್ಟರ್‌ ಮುಖೇನ ಡಾನ್‌ಬಾಸ್ಕೋ ಹಾಲ್‌ನಲ್ಲಿ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ. ಹಳೆಯ ಸಿನೆಮಾ ಪ್ರದರ್ಶನವಾಗುವ ಮೂಲಕ ಹಿಂದಿನ ತುಳು ಚಿತ್ರರಂಗವನ್ನು ಈಗಿನ ಚಿತ್ರಪ್ರೇಮಿಗಳು ಆಸ್ವಾಧಿಸುವ ಅವಕಾಶ ದೊರೆತಂತಾಗಿದೆ.

ಸಿನೆಪೊಲಿಸ್‌ನಲ್ಲಿರುವ ಪ್ರದರ್ಶನಕ್ಕೆ ಪ್ರತೀ ಟಿಕೆಟ್‌ಗೆ 100 ರೂ. ಎಂದು ದರ ನಿಗದಿಮಾಡಲಾಗಿದ್ದು, ಡಾನ್‌ಬಾಸ್ಕೋ ಪ್ರದರ್ಶನಕ್ಕೆ 50 ರೂ. ಎಂದು ನಿರ್ಧರಿಸಲಾಗಿದೆ. ಉಳಿದಂತೆ ಯಾವುದೇ ಸಿನೆಮಾ ನೋಡಲು ಅವಕಾಶವಿರುವ ಗೋಲ್ಡ್‌ ಪಾಸ್‌ಗೆ 1,500 ರೂ. ದರ ನಿಗದಿ ಮಾಡಲಾಗಿದೆ

‘7 ದಿನ ನಡೆಯಲಿರುವ ‘ತುಳು ಫಿಲ್ಮ್ ಫೆಸ್ಟಿ ವಲ್‌’ನ ಹಿನ್ನೆಲೆಯಲ್ಲಿ ಜ.4ರಂದು ಸಂಜೆ 4.30ಕ್ಕೆ ಪುರಭವನದಲ್ಲಿ ಉದ್ಘಾಟನೆ ನಡೆಯಲಿದೆ. ಮರದಿನದಿಂದ ನಡೆಯುವ ಎಲ್ಲ ಸಿನೆಮಾ ಪ್ರದರ್ಶನಕ್ಕೂ ಮೊದಲು ಸುಮಾರು 20 ನಿಮಿಷ ಸಂಬಂಧಿತ ಚಿತ್ರತಂಡದವರ ಜತೆಗೆ ಸಂವಾದ ಆಯೋಜಿಸಲಾಗಿದೆ. ಚಿತ್ರವೀಕ್ಷಕರು ಭಾಗವಹಿಸಬಹುದು.