- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಾರ್ ಹಾಗೂ ರೆಸ್ಟೋರೆಂಟ್: ರೂಫ್ ಟಾಪ್ ಬಂದ್ ಗೆ ಬಿಬಿಎಂಪಿ ನೋಟಿಸ್

BBMP [1]ಬೆಂಗಳೂರು: ಮುಂಬೈನಲ್ಲಿ ಕಳೆದ ವಾರ ಸಂಭವಿಸಿದ ಅಗ್ನಿ ಅನಾಹುತದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲೂ ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಜಯನಗರ 4ನೇ ಹಂತದಲ್ಲಿರುವ ಕೇಕ್ವಾಲಾ ಸೇರಿದಂತೆ ಮೂರು ರೂಫ್ ಟಾಪ್ ಬಾರ್ ಗಳನ್ನು ಬಂದ್ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಮುದ್ರಣ ಮಳಿಗೆಗಳ ಮೇಲೆ ದಾಳಿ ನಗರದ ಹಲವು ರೂಫ್ ಟಾಪ್ ಮಳಿಗೆಗಳಿಗೆ ಶುಕ್ರವಾರ(ಜ.05 )ರಂದು ಭೇಟಿ ನೀಡಿದ್ದ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು, ನಿಯಮ ಉಲ್ಲಂಘನೆ ಪತ್ತೆ ಹಚ್ಚಿದದ್ಆರೆ. ಗ್ರಿಲ್ ಸ್ಕ್ಯೂರ್, ಒನ್ಸ್ ಓಪನ್ ರೂಫ್, ಟಾಪ್ ಬಾರ್ ಗಳಿಗೂ ನೋಟಿಸ್ ನೀಡಿದರು. ಕಟ್ಟಡ ನಿರ್ಮಾಣ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಗರದ ಹಲವು ರೂಫ್ ಟಾಪ್ ಪಬ್, ಬಾರ್, ರೆಸ್ಟೋರೆಂಟ್ ಗಳನ್ನು ಬಂದ್ ಮಾಡುವಂತೆ ನೋಟಿಸ್ ನೀಡಿದ್ದೇವೆ, ದಂಡವನ್ನೂ ವಿಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು ಬಿಬಿಎಂಪಿ ಅಧಿಕಾರಿಗಳು ನಗರದ ವಿವಿದೆಡೆ 69 ರೂಫ್ ಟಾಪ್ ಬಾರ್ ಗಳಿಗೆ ನೋಟಿಸ್ ಗಳನ್ನು ಜಾರಿ ಮಾಡಿ ಬಂದ್ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಬಿಬಿಎಂಪಿ ದಕ್ಷಿಣ ವಲಯದ 38 ರೂಫ್ ಟಾಪ್ ಬಾರ್ ಮತ್ತು ರೆಸ್ಟೋರೆಂಟ್ ಗಳ ಪೈಕಿ 12 ಬಾರ್ ಮತ್ತು ರೆಸ್ಟೋರೆಂಟ್ ಗಳ ಪರಿಶೀಲನೆ ನಡೆಸಿ ಅವುಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಮನೋರಂಜನ್ ಹೆಗಡೆ ತಿಳಿಸಿದ್ದಾರೆ. ಬಿಬಿಎಂಪಿ ಈವರೆಗೆ ನಡೆಸಿರುವ ರೂಫ್ ಟಾಪ್ ಮತ್ತು ರೆಸ್ಟೋರೆಂಟ್ ದಾಳಿಗಳ ಪೈಕಿ ಬಾಣಸವಾಡಿ ಪ್ರದೇಶದಲ್ಲಿರುವ ಒನೆಸ್ಟಾ ರೂಫ್ ಟಾಪ್ ಬಾರ್ ಮೊದಲ ಬಂದ್ ಮಾಡಿಸಲಾಗ ರೂಫ್ ಟಾಪ್ ಹಾಗೂ ರೆಸ್ಟೋರೆಂಟ್ ಆಗಿದ್ದು5ಲಕ್ಷ ರೂ. ದಂಡ ವಿಧಿಸಲಾಗಿದೆ.

ರಾಸ್ತಾ ಕೆಫೆ ಎನ್ನುವ ಬಾರ್ ಹಾಗೂ ರೆಸ್ಟೋರೆಂಟ್ ಹಾಗೂ ಲ್ಯಾವಲ್ಲೆ ರಸ್ತೆಯಲ್ಲಿರುವ ಔಟ್ ಲೆಟ್ ಆಟಿಕ್ ಹಾಗೂ ಲೇಡಿ ಬಗ್ ಗಳಿಗೂ 5 ಲಕ್ಷ ರೂ ದಂಡ ವಿಧಿಸಲಾಗಿದೆ.