- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿರಿಯ ಬಹುಭಾಷಾ ನಟಿ ‌ಕೃಷ್ಣಕುಮಾರಿ ವಿಧಿವಶ

krishnakumari [1]ಬೆಂಗಳೂರು: ಹಿರಿಯ ಬಹುಭಾಷಾ ನಟಿ ಕೃಷ್ಣಕುಮಾರಿ ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದು, ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ 88 ವರ್ಷದ ಹಿರಿಯ ನಟಿ ಇಹಲೋಕ ತ್ಯಜಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೃಷ್ಣಕುಮಾರಿ ನಟಿಸಿದ್ದರು.

ಕೃಷ್ಣಕುಮಾರಿ ಅವರು ಡಾ.ರಾಜ್ ಕುಮಾರ್, ಎನ್‌ಟಿಆರ್, ಎಎನ್ಆರ್, ಶಿವಾಜಿ ಗಣೇಶನ್ ಜೊತೆ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ ಭಕ್ತ ಕನಕದಾಸ, ಆಶಾ ಸುಂದರಿ, ಶ್ರೀಶೈಲ ಮಹಾತ್ಮೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.