- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೆಜೆಸ್ಟಿಕ್‌, ಏರ್‌ಪೋರ್ಟ್‌ನಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ… ನಮ್ಮ ಮೆಟ್ರೋ ಸಂಚಾರ

bangaluru [1]ಬೆಂಗಳೂರು: ಮಹದಾಯಿಗಾಗಿ ಕರೆ ನೀಡಿರುವ ರಾಜ್ಯ ಬಂದ್ ಹಿನ್ನಲೆಯಲ್ಲಿ ಬಿಎಂಟಿಸಿ ಹಾಗು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ತಗಿತಗೊಂಡಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಂದ್ ಹಿನ್ನಲೆಯಲ್ಲಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಇಡೀ ನಿಲ್ದಾಣ ಬಿಕೋ ಎನ್ನುತ್ತಿದೆ. ಬಂದ್ ಇದ್ದರೂ ಕೆಲ ಪ್ರಯಾಣಿಕರು ಮೆಜೆಸ್ಟಿಕ್‌ಗೆ ಆಗಮಿಸಿ ಮುಂದಿನ ಪ್ರಯಾಣಕ್ಕೆ ಬಸ್ ಸಿಗದೆ ಬಸ್ ನಿಲ್ದಾಣದಲ್ಲೇ ಕಾದು ಕುಳಿತುಕೊಂಡಿದ್ದಾರೆ. ಬಸ್‌ಗಾಗಿ ಎದುರು ನೋಡುತ್ತಿದ್ದಾರೆ.

ಇನ್ನು ನಗರದ ಶಾಂತಿನಗರ, ಯಶವಂತಪುರ, ವಿಜಯನಗರ, ಬನಶಂಕರಿ ಸೇರಿದಂತೆ ಎಲ್ಲಾ ಟಿಟಿಎಂಸಿಗಳಲ್ಲಿಯೂ ಬಸ್ ಸಂಚಾರ ಸ್ತಗಿತಗೊಂಡಿದ್ದು, ಡಿಪೋ ದಿಂದ ಬಸ್‌ಗಳು‌ ಹೊರಬಂದಿಲ್ಲ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೂ ಬಸ್ ನೀಡಲು ಡಿಪೋ ವ್ಯವಸ್ಥಾಪಕರು ನಿರಾಕರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೂ ಕೂಡ ಇದೇ ಪರಿಸ್ಥಿತಿ ಇದೆ, ಯಾವುದೇ ಬಸ್‌ಗಳು ನಿಲ್ದಾಣದಿಂದ ಹೊರ ಹೋಗುತ್ತಿಲ್ಲ, ಆಟೋ, ಟ್ಯಾಕ್ಸಿಗಳ ಸಂಚಾರ ಕೂಡ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ರೈಲು ಸಂಚಾರ ಎಂದಿನಂತೆ ನಡೆಯುತ್ತಿದೆ. ಮುಂಜಾಗೃತಾ ಕ್ರಮವಾಗಿ ರೈಲ್ವೆ ಪೊಲೀಸರು ನಿಲ್ದಾಣವನ್ನು ಹಾಗು ರೈಲುಗಳ ತಪಾಸಣೆ ನಡೆಸಿದ್ದು ರೈಲುಗಳಲ್ಲಿ‌ ಕರವೇ ಕಾರ್ಯಕರ್ತರು ಇರಬಹುದು ಎನ್ನುವ ಶಂಕೆಯಿಂದ ತಪಾಸಣೆ ನಡೆಸಿದ್ದಾರೆ. ಭದ್ರತೆಯನ್ನು ಹೆಚ್ಚಿಸಿ ರೈಲು ತಡೆಗೆ ಅವಕಾಶ ನೀಡದೆ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

bangaluru-2 [2]ಇನ್ನು ಮೆಜೆಸ್ಟಿಕ್ ಸುತ್ತ ಮುತ್ತಲು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೆಲವೆಡೆ ರಸ್ತೆ ತಡೆ ನಡೆಸಿದ್ದು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂದ್‌ ಹಿನ್ನಲೆ ಕೆಂಪೇಗೌಡ ಅಂತಾರಾಷ್ಟ್ರಿಯಾ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯ ವಾಯು ವಜ್ರ ಬಸ್‌ಗಳು ಆಮಿಸಿಲ್ಲ. ಬಸ್‌ಗಳಿಲ್ಲದ ಪರಿಣಾಮ ಏರ್‌ರಪೋರ್ಟ್‌ ಬಿಎಂಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಸ್‌ ಸಂಚಾರ ಪರಿಣಾಮ ಟ್ಯಾಕ್ಸಿಗಳ ಮೊರೆಹೋದ ಪ್ರಯಾಣಿಕರು. ಎಂದಿನಂತೆ ಕಾರ್ಯಾ ನಿರ್ವಹಿಸುತ್ತಿರೂ ಏರ್ಪೋಟ್ ಟ್ಯಾಕ್ಸಿಗಳು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಂಚಾರ ಸ್ಥಗಿತಗೊಂಡಿದ್ದರೂ ನಮ್ಮ ಮೆಟ್ರೋ ರೈಲು ಸಂಚಾರ ಎಂದಿನಂತಿದೆ. ಬೆಳಗ್ಗೆಯಿಂದ ನಿಗದಿತ ವೇಳಾಪಟ್ಟಿಯಂತೆ ರೈಲುಗಳು ಸಂಚಾರ ಆರಂಭಿಸಿವೆ.

ಬಂದ್ ಹಿನ್ನಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದರೂ ಕೂಡ ಮೆಟ್ರೋ ರೈಲುಗಳ ಸಂಚಾರವನ್ನು ಬಿಎಂಆರ್‌ಸಿಎಲ್ ಮುಂದುವರೆಸಿದೆ. ನಗರದ ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ಹಸಿರು ಮಾರ್ಗ ಹಾಗು ನಾಗಸಂದ್ರದಿಂದ ಯಲಚೇನಹಳ್ಳಿವರೆಗಿನ ನೇರಳೆ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲು ಸಂಚಾರ ಮುಂದುವರಿದಿದೆ.