- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೈಸೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ… ಸಿಎಂ ವಿರುದ್ಧ ಅಮಿತ್‌ ಷಾ ತೀವ್ರ ವಾಗ್ದಾಳಿ

amit-shah [1]ಮೈಸೂರು: ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಹೇಳುತ್ತಾ ಹೋದರೆ 7 ದಿನ ಬೇಕಾಗುತ್ತದೆ. ಅಷ್ಟು ಮಾಹಿತಿ ನನ್ನ ಬಳಿ ಇದೆ, ಭ್ರಷ್ಟ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲೇಬೇಕೆಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭಾವಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ತಮ್ಮ ಭಾಷಣ ಆರಂಭಿಸಿದರು. ಮುಖ್ಯಮಂತ್ರಿಗಳ ಬಂದ್ ನಡುವೆಯೇ ಸಾಕಷ್ಟು ಸಂಖ್ಯೆಗಳಲ್ಲಿ ಜನರು ಆಗಮಿಸಿದ್ದೀರಾ. ಭ್ರಷ್ಟ, ದುರಂಹಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಸಿಎಂ ತವರು ಜಿಲ್ಲೆಯಲ್ಲಿ ಅವರು ಮನವಿ ಮಾಡಿದರು.

ಈ ಸರ್ಕಾರ ರೈತಮಿತ್ರ ಸರ್ಕಾರ ಅಂತ ಹೇಳುತ್ತೆ. ಆದರೆ 2500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರ ನೀಡುವುದಿಲ್ಲ. ಇಂದು ಮೈಸೂರಿನಲ್ಲಿ ಪರಿವರ್ತನೆ ಯಾತ್ರೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ನವೆಂಬರ್ 2 ರಂದು ಆರಂಭಗೊಂಡು, ಫೆಬ್ರವರಿ 4 ರಂದು ಕೊನೆಗೊಳ್ಳಲಿದೆ, ಹೋಗುತ್ತಾ ಹೋಗುತ್ತಾ ಈ ಯಾತ್ರೆ ಕಾಂಗ್ರೆಸ್‌ನಲ್ಲಿ ಭಯವನ್ನು ಉಂಟು ಮಾಡುತ್ತಿದೆ. ಇಂದು ಸರ್ಕಾರ ಯಾತ್ರೆಗೆ ಹೆದರಿ ಬಂದ್‌ಗೆ ಕರೆ ನೀಡಿ ತೊಂದರೆ ನೀಡಿದೆ.

amit-shah-2 [2]ಸರ್ಕಾರಕ್ಕೆ ನಾನು ಚಾಲೆಂಜ್‌ ಮಾಡುತ್ತೇನೆ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಫೆ.4 ರಂದು ಮೋದಿಯವರ ರ‍್ಯಾಲಿಯನ್ನು ತಡೆಯಲು ಬಂದ್ ಮಾಡಲು ಯತ್ನಿಸುತ್ತಿದ್ದಾರೆ. ನನಗೆ ವಿಶ್ವಾಸವಿದೆ ಫೆ.4 ರಂದು ನಡೆಯುವ ರ‍್ಯಾಲಿಯಲ್ಲಿ ಬೆಂಗಳೂರಿನ ಯಾತ್ರೆಗೆ ಜನರು ಬರುತ್ತಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

ಇಂದು ನಾನು ಮೈಸೂರಿನ ಪವಿತ್ರ ಭೂವಿಯಲ್ಲಿದ್ದೇನೆ. ಚಾಮುಂಡೇಶ್ವರಿ ಮೈಷಾಸುರನ್ನು ಸಂಹರಿಸಿದ್ದ ನಾಡು ಇದು. ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ 224 ಕ್ಷೇತ್ರಗಳಲ್ಲಿ 8 ಸಾವಿರ ಕಿ.ಮೀ ದೂರ ಕ್ರಮಿಸಿ ಮೈಸೂರಿಗೆ ಬಂದಿದೆ. ಕರ್ನಾಟಕದ ಯಾವ ರಾಜಕಾರಣಿಯೂ ಸಹ ಈ ತರಹದ ಯಾತ್ರೆ ಮಾಡಿರಲಿಲ್ಲ ಎಂದರು.

ಕರ್ನಾಟಕ ನಿರ್ಮಾಣಕ್ಕಾಗಿ ಅನೇಕರು ಶ್ರಮಿಸಿದ್ದಾರೆ ಅವರ ಜಯಂತಿ ಬಿಟ್ಟು, ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನ ಮಾಡಿದ್ದೀರಿ. ಈ ಮೂಲಕ ಸಮಾಜ ಒಡೆಯುವ ಕೆಲಸ ಮಾಡಿದರು. ಕರ್ನಾಟಕದಲ್ಲಿ 20 ಜನ ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆ ನಡೆದಿದೆ. ಎಸ್‌ಡಿಪಿಐ ಮೇಲೆ ಇದ್ದಂತಹ ಎಲ್ಲಾ ಕೇಸ್‌ಗಳನ್ನು ಹಿಂದೆ ತೆಗೆದುಕೊಂಡಿದ್ದಾರೆ. ನಾವು ಪ್ರಶ್ನೆ ಮಾಡುತ್ತೇವೆ. ನೀವು ಅವರನ್ನ ಬೆಂಬಲಿಸುತ್ತೀರಾ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅನುಮತಿ ಕೊಡುವುದಿಲ್ಲ. ಆದರೆ ಬೇರೆ ಕೆಲಸಗಳೀಗೆ ಅನುಮತಿ ನಿಡುತ್ತೀರಾ. ಸಿದ್ದರಾಮಯ್ಯ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.