ಉಡುಪಿ: ಖಗ್ರಾಸ ಚಂದ್ರ ಗ್ರಹಣ ನಿಮಿತ್ತ ಜ. 31ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಧ್ಯಾಹ್ನ 2.30 ಗಂಟೆಯಿಂದ ರಾತ್ರಿ 9ರ ವರೆಗೆ ಶ್ರೀ ಮಂಜುನಾಥ ದೇವರ ದರ್ಶನ ಹಾಗೂ ಪೂಜಾದಿ ಸೇವೆಗಳು ಇರುವುದಿಲ್ಲ. ರಾತ್ರಿ 9.30ರಿಂದ 10.30ರ ವರೆಗೆ ಭಕ್ತರಿಗೆ ಹೊರಾಂಗಣದಿಂದ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 31ರಂದು ಚಂದ್ರ ಗ್ರಹಣ ನಿಮಿತ್ತ ದೇವರ ದರ್ಶನದ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದೇಗುಲದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ. ಬೆಳಗ್ಗೆ 6.30ರಿಂದ 9ರ ತನಕ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ.
9 ಗಂಟೆ ಬಳಿಕ ಯಾವುದೇ ಸೇವೆಗಳು ನಡೆ ಯು ವು ದಿಲ್ಲ. ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 8ಕ್ಕೇ ನೆರ ವೇರು ತ್ತದೆ. ಮಧ್ಯಾಹ್ನದ ಅನ್ನಪ್ರಸಾದ ವಿತ ರಣೆಯೂ ಇರುವುದಿಲ್ಲ. ರಾತ್ರಿ 8.30ರಿಂದ ದೇವರ ದರ್ಶನಕ್ಕೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 8 ಗಂಟೆಯೊಳಗೆ ಮಹಾಪೂಜೆ ಮತ್ತು ಸಂಜೆ ಚಂದ್ರೋದಯದೊಳಗೆ ರಾತ್ರಿ ಪೂಜೆ ಮುಗಿಯುತ್ತದೆ. ಗ್ರಹಣ ಆರಂಭ ಮತ್ತು ಅಂತ್ಯದಲ್ಲಿ ಮತ್ತೆ ಸ್ನಾನ ಜಪತಪಾದಿಗಳನ್ನು ನಡೆಸಲಾಗುವುದು.
ಅಂದು ಭೋಜನ ನಿಷಿದ್ಧ ವಾಗಿದ್ದರೂ ಯಾತ್ರಾರ್ಥಿ ಗಳಿಗೆ ಮಾತ್ರ ಬೆಳಗ್ಗೆ 8ರಿಂದ 10 ಗಂಟೆಯ ವರೆಗೆ ಮತ್ತು ರಾತ್ರಿ 8.45ಕ್ಕೆ ಗ್ರಹಣ ಮುಗಿದ ಬಳಿಕ ಉಪಾಹಾರದ ವ್ಯವಸ್ಥೆ ಮಾಡ ಲಾಗುವುದು. ದೇವರ ದರ್ಶನಕ್ಕೆ ಇಡೀ ದಿನ ಅವಕಾಶ ಇರುತ್ತದೆ. ಏಕಾದಶಿ ರೀತಿಯಲ್ಲಿ ನಿರ್ಜಲ ಉಪವಾಸವಿದ್ದರೂ ಸ್ವಾಮೀಜಿಯವರು ಮರುದಿನದ ಮಧ್ಯಾಹ್ನವೇ ಪೂಜೆ ನಡೆಸುತ್ತಾರೆ.
Click this button or press Ctrl+G to toggle between Kannada and English