ಮಂಗಳೂರು: ‘ಒರಿಯರ್ದೊರಿ ಅಸಲ್’ ಚಲನಚಿತ್ರದ ಶತದಿನ ಸಂಭ್ರಮ ನಗರದ ಪುರಭವನದಲ್ಲಿ ಬುಧವಾರ ವರ್ಣರಂಜಿತವಾಗಿ ಜರಗಿತು. ಶತದಿನ ಕಾರ್ಯಕ್ರಮವನ್ನು ಶಾಸಕ ಕೆ. ಅಭಯಚಂದ್ರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತುಳುಚಿತ್ರರಂಗದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಅಸಲ್ ಚಿತ್ರ ವರ್ಷಕಾಲ ಪ್ರದರ್ಶನವಾಗುತ್ತಿರಲೆಂದು ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತುಳು ಚಿತ್ರರಂಗಕ್ಕೆ -ಅಸಲ್ ಚಿತ್ರ ಒಂದು ಅಪೂರ್ವ ಆಯಾಮ ನೀಡಿದೆ. ತುಳು ಚಿತ್ರಕ್ಕೆ ಭವಿಷ್ಯವಿದೆ ಎಂಬುದನ್ನು ಜಿಲ್ಲೆಯ ತುಳುವರು ಸಾಬೀತು ಗೊಳಿಸಿದ್ದಾರೆ ಎಂದರು.
ಶತದಿನ ಸಂಭ್ರಮದ ನೆನಪಿಗಾಗಿ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.
ವಿಜಯಕುಮಾರ್ ಕೊಡಿಯಾಲಬೈಲ್ ಅವರು ಪ್ರಸ್ತಾವನೆಗೈದರು. ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ತುಳುನಾಡಿನ ತುಳುವರಿಗೆ ತಾನು ಕೃತಜ್ಞ ಎಂದರು. ಮುಂದೆ ತುಳುವರಿಗೆ ಯಾವ ಅಭಿರುಚಿಯ ಚಿತ್ರ ಬೇಕೆಂಬುದನ್ನು ಮನಗಂಡು ಚಿತ್ರ ತಯಾರಿಸುವುದಾಗಿ ಹೇಳಿದರು.
ರೆ| ಫಾ| ವೆಲೆರಿಯನ್ ಮೆಂಡೋನ್ಸಾ, ಬಿ. ನಾಗರಾಜ ಶೆಟ್ಟಿ, ಡಾ| ಆಶಾಜ್ಯೋತಿ ರೈ, ಡಾ| ರಿಚರ್ಡ್ ಕ್ಯಾಸ್ಟೆಲಿನೋ, ಕುಮಾರ್ ಬಂಗೇರಾ, ಎಂ. ಬಾಲಕೃಷ್ಣ ಶೆಟ್ಟಿ, ರಾಮ್ ಶೆಟ್ಟಿ, ಟಿ. ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿದ್ದರು. ನಿರ್ದೇಶಕ ಹ.ಸೂ. ರಾಜಶೇಖರ್, ನಿರ್ಮಾಪಕಿ ರೂಪ ವಿಜಯಕುಮಾರ್, ಕಲಾವಿದರಾದ ಲಿಖೀತ್ ಶೆಟ್ಟಿ, ರಮ್ಯಾ ಬಾರ್ನೆ, ರೇಖಾದಾಸ್ ವೇದಿಕೆಯಲ್ಲಿದ್ದರು.
Click this button or press Ctrl+G to toggle between Kannada and English