ಮಂಗಳೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಕ್ಕಡ ಗ್ರಾಮ ಪಂಚಾಯತ್‌ನಲ್ಲಿ ಇಂದು ಎಸಿಬಿ ದಾಳಿ ನಡೆಸಿದೆ.
ಲಂಚ ಕೇಳಿದ್ದರೆನ್ನಲಾದ ಪಿಡಿಒ ಪುರುಷೋತ್ತಮ ಹಾಗೂ ಅಧ್ಯಕ್ಷ ಸೆಬಾಸ್ಟಿಯನ್ ಎಂಬುವರನ್ನು ಎಸಿಬಿ ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದೆ.
ಸ್ಥಳೀಯ ಗುತ್ತಿಗೆದಾರ ಉಮರ್ ಎಂಬುವರ ಕಾಮಗಾರಿಯ ಬಿಲ್ ಪಾಸ್ ಮಾಡಲು 30 ಸಾವಿರ ಲಂಚ ಕೇಳಿದ್ದರು ಎಂದು ಉಮರ್ ಎಸಿಬಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English