- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸೇಡಿನ ರಾಜಕೀಯ ಮಾಡುವ ಮೂಲಕ ಕೀಳು ಮಟ್ಟಕ್ಕೆ ರಾಜಕಾರಣ : ಮುನಿಯಾಲು ಉದಯ ಶೆಟ್ಟಿ

congress [1]ಕಾರ್ಕಳ: ಕಾರ್ಕಳ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ದಿ ನಡೆಸಿ, ಸಿಇಟಿ ಮೂಲಕ ಮನೆಮನೆಯ ಬೆಳಕನ್ನು ಬೆಳಗಿಸಿದ ಡಾ.ಎಂ.ವೀರಪ್ಪ ಮೊಯ್ಲಿ ಅವರನ್ನು ಬಿಜೆಪಿಗರು ಕೀಳುಮಟ್ಟದಲ್ಲಿ ನಿಂದಿಸಿಸುವ ಮೂಲಕ ಸೇಡಿನ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.

ಅವರು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿಯ ಅವಳಹೇಳನವನ್ನು ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಬಂಡೀ ಮಠ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಷ್ಟ್ರ ನಾಯಕ ಮೊಯ್ಲಿ, ಸಜ್ಜನರಾಗಿ, ಭ್ರಷ್ಟಚಾರ ರಹಿತ ಆಡಳಿತ ನೀಡಿದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಅವರ ಬಗ್ಗೆಯೂ ಬಿಜೆಪಿ ಹಗುರವಾಗಿ ಮಾತನಾಡಿದ್ದಾರೆ. ಲಾಟೀನ್ ಹಿಡಿದುಕೊಂಡು ರಾತ್ರಿ ಪುರಭವನ ಹುಡುಕಿಕೊಡಿ ಎಂದು ಅಪಹಾಸ್ಯ ಮಾಡಿ ಪ್ರತಿಭಟಿಸುವ ಮೂಲಕ ಕೀಳು ಮಟ್ಟದಲ್ಲಿ ರಾಜಕೀಯ ಮಾಡಿ ಸೇಡಿನ ರಾಜಕೀಯಕ್ಕೆ ಫ್ಲೆಕ್ಸ್‌ಗಳನ್ನು ಬಳಸಿದ್ದಾರೆ ಇದು ಬಿಜೆಪಿಗೆ ಶೋಭೆ ತರುವ ವಿಚಾರವಲ್ಲ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರಕಾರದ ಯೋಜನೆಗೆಗಳು ಎಲ್ಲಾರ ಮನೆ ಮನೆಗೆ ತಲುಪಿದೆ, ಕಳೆದ 9 ವರ್ಷಗಳ ಬಳಿಕ ರಾಜ್ಯದಲ್ಲಿದ್ದ ರೇಶನ್ ಕಾರ್ಡ್ ಸಮಸ್ಯೆ ನೀಗಿಸಿ, ಹೆಚ್ಚಿನ ಎಲ್ಲಾ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಿದ್ದಾರೆ. ಇದರಿಂದ ಉಚಿತ ಅಕ್ಕಿಯನ್ನು ಜನತೆ ಪಡೆಯುವಂತಾಗಿದೆ. ಹಸಿವು ಮುಕ್ತ ರಾಜ್ಯವನ್ನಾಗಿಸಿದ ಕೀರ್ತಿಯ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಕೂಡಾ ಶ್ಲಾಘಿಸಿರುವುದನ್ನು ಅವರು ಈ ಸಂದರ್ಭ ನೆನಪಿಸಿದರು.

ಕಾರ್ಕಳ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ದಿ ನಡೆಸಿ, ಸಿಇಟಿ ಮೂಲಕ ಮನೆಮನೆಯ ಬೆಳಕನ್ನು ಬೆಳಗಿಸಿದ ಕೀರ್ತಿನಮ್ಮ ವೀರಪ್ಪ ಮೊಯ್ಲಿಗೆ ಸಲ್ಲತ್ತದೆ ಅಂತ ನಾಯಕರ ಬಗ್ಗೆ ಟೀಕೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಕಾರ್ಕಳ ಶಾಸಕರು ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಜನರ ಒಗ್ಗಟ್ಟು ಹೊಡೆದು ಹಾಕಿ ಅವರ ನಡುವೆ ದ್ವೇಷ ಭಾವನೆ ತುಂಬುವಂತಹ ಕೆಲಸ ಮಾಡುತ್ತಿದ್ದಾರೆ. ಮುಂದಿನಗಳಲ್ಲಿ ಚುನಾವಣೆ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದೇವೆ.

ಮಂಗಳೂರು ಕಾರ್ಪರೇಟರ್ ಪ್ರತಿಭಾ ಕುಳಾಯಿ ಮಾತನಾಡಿ, ಮೋದಿ ಜಾದು ಜಾಗನೂ ಹೌದು ಸುಳ್ಳುಗಾರೂ ಹೌದು ಬಣ್ಣ ಬಣ್ಣದ ಮಾತಗಳನ್ನು ಆಡಿ ಸ್ವರ್ಗವೇ ನಿಮ್ಮ ಮನೆಗೆ ತರುವುದಾಗಿ ಜನತೆಯನ್ನು ನಂಬಿಸಿ ಯಾವುದೇ ಜನಪರ ಯೋಜನೆಗನ್ನು ನೀಡದೇ ಮೋಸಮಾಡುತ್ತಿದ್ದಾರೆ. ಯತಾ ರಾಜ ತಾತ ಪ್ರಜಾ ಎಂಬಂತೆ ಕಾರ್ಕಳ ಶಾಸಕರು ಅದನ್ನೇ ಮಾಡುತ್ತಿದ್ದಾರೆ. ಸುಚಿತ್ರ ಕೊಲೆ ಪ್ರಕರಣವನ್ನು ಮುಂದಿಟ್ಟು ನ್ಯಾಯ ಒದಗಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವುದಾಗಿ ನಂಬಿಸಿ ಓಟು ಗಿಟ್ಟಿಸಿ ಗೆದ್ದ ಬಳಿಕ ಆ ವಿಚಾರವನ್ನೇ ಮರೆತು ಹೋಗಿದ್ದಾರೆ. ಇಂತಹ ಸುಳ್ಳ ಶಾಸಕರು ಬೇಕೆ ಜನರು ತೀರ್ಮಾನಿಸಲಿ ಎಂದರು.

ಮಂಗಳೂರು ವಿವಿ ಸೆನೆಟ್ ಸದಸ್ಯ ಅಮೃತ್‌ಶೆಣೈ ಮಾತನಾಡಿ, ಪುರಭವನ ಹುಡುಕುದನ್ನು ಬಿಟ್ಟು ಈ ಭಾಗದ ಸಂಸದೆ ಶೋಭ ಕರಂದಾಜ್ಲೆಯನ್ನು ಮೊದಲು ಹುಡುಕಿಕೊಡಿ. ಈ ಕ್ಷೇತ್ರ ಬಿಟ್ಟು ಸ್ಥಳೀಯ ಜಿಲ್ಲೆಯಲ್ಲಿ ಸಂಸದೆಗೆ ಏನು ಕೆಲಸ. ಕಾರ್ಕಳ ಶಾಸಕರು ಮೊದಲು ರಾಮಮಂದಿರವನ್ನು ಹುಡುಕಿಕೊಡಿ. ಲಲಿತ್ ಮೋದಿ, ವಿಜಯ್ ಮಲ್ಯ ಸಾವಿರ ಕೊಟಿ ರೂ. ಪಂಗನಾಮ ಹಾಕಿದ ಬಗ್ಗೆ ಮೋದಿ ಮಾತನಾಡಲ್ಲ. ಈ ದೇಶದಲ್ಲಿ ಕಾಂಗ್ರೆಸ್ ಸರಕಾರ ಹೊರತು ಪಡಿಸಿ, ಅನ್ಯ ಸರಕಾರಗಳು ಮರು ಅಧಿಕಾರಕ್ಕೆ ಬಂದ ಉದಾಹರಣೆಗಳಿಲ್ಲ. ಇದರಿಂದ ಅನ್ಯ ಪಕ್ಷಗಳ ಮೇಲೆ ಜನತೆಗೆ ನಂಬಿಕೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಡಾ. ವರ್ಷ ಶೈಲೇಶ್ ಸುವರ್ಣ ಮಾತನಾಡಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರಕಾರವಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ದಾಖಲೆಯ ಅಭಿವೃದ್ದಿ ಸಾಧಿಸಿದೆ. ವಿವಿಧ ಯೋಜನೆಯ ಮೂಲಕ ಪ್ರತಿಯೊಂದು ಜನತೆಯನ್ನು ತಲುಪುವ ಕಾರ್ಯ ಮಾಡಿದೆ ಎಂದರು.

ಮುಹಮ್ಮದ್ ಶರೀಫ್ ಮಾತನಾಡಿ, ರಾಜಕೀಯ ಸೇವೆ ವ್ಯವಹಾರವಲ್ಲ. ಸುಳ್ಳ ಹೇಳಿ ಅಧಿಕಾರ ಪಡೆದ ಪಕ್ಷವೇ ಬಿಜೆಪಿ. ಬಂಡೀಮಠ ಬಸ್ಸು ನಿಲ್ದಾಣ ಎಲ್ಲಿದೆ ? ಎಂದು ಶಾಸಕರು ಹುಡುಕಿಕೊಡಿ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪ್ರಮುಖರಾದ ಅವೆಲಿನ್ ಆರ್.ಲೂಯಿಸ್, ಡಾ. ಸಂತೋಷ್ ಕುಮಾರ್ ಶೆಟ್ಟಿ, ವರೇನಿಕ ಕರ್ನೇಲಿಯೋ, ಮುರಳಿ ಶೆಟ್ಟಿ, ನೇಮಿರಾಜ ರೈ ನಿಟ್ಟೆ, ಸುಧಾಕರ ಶೆಟ್ಟಿ ಮುಡಾರು, ಎಂ.ಪಿ.ಮೊಯ್ದಿನಬ್ಬ ಇನ್ನ, ಅಶ್ಪಕ್ ಅಹ್ಮದ್ ಕಾರ್ಕಳ, ಜೋನ್ ಡಿಸಿಲ್ವ ಕುಂಟಲ್ಪಾಡಿ, ದೀಪಕ್ ಕೋಟ್ಯಾನ್ ಇನ್ನ, ಪ್ರತಿಮಾ ಕಾರ್ಕಳ, ರೆಹಮತ್ ಎನ್.ಶೇಖ್ ಕಾರ್ಕಳ, ಸಂತೋಷ್ ಶೆಟ್ಟಿ ಹಿರ್ಗಾನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶುಭದರಾವ್ ಪ್ರಾಸ್ತವಿಕವಾಗಿ ಮಾತನಾಡಿದರು, ಡೇನಿಯಸ್ ಮಸ್ಕಾರೇನಸ್ ಮಿಯ್ಯಾರು ಕಾರ್ಯಕ್ರಮ ನಿರೂಪಿಸಿದರು.