- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಲೇ ಪುದರ್ ದೀಕ ಈ ಪ್ರೀತಿಗ್ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

tulu-film [1]ಮಂಗಳೂರು : ಜೆ.ವಿ ಪ್ರೊಡಕ್ಷನ್ ಲಾಂಛನದಲ್ಲಿ ವಿ. ಹೃದಯ್ ಅರ್ಪಿಸುವ ಜೆ.ವಿ ಮನೋರಂಜನ್ ನಿರ್ದೇಶನದಲ್ಲಿ ವಿನಯ್ ಕುಮಾರ್ ಜೆವಿ ಮತ್ತು ಸುದರ್ಶನ್ ಜೆ.ವಿ ನಿರ್ಮಾಣದಲ್ಲಿ ತಯಾರಾದ ತುಳುವಿನ 87ನೇ ಸಿನಿಮಾ ಬಲೇ ಪುದರ್ ದೀಕ ಈ ಪ್ರೀತಿಗ್ ಮಂಗಳೂರಿನ ಜ್ಯೋತಿ ಚಿತ್ರ ಮಂದಿರದಲ್ಲಿ ತೆರೆ ಕಂಡಿದೆ.

ಎಸ್‌ಡಿಎಂ ಕಾಲೇಜ್‌ನ ಪ್ರಿನ್ಸಿಪಾಲ್ ದೇವದಾಸ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತುಳುವಿನಲ್ಲಿ ಪ್ರೇಕ್ಷಕರು ಬಯಸುವ ಹಾಸ್ಯ ಸಿನಿಮಾಗಳ ಜತೆಗೆ ಸಮಾಜಕ್ಕೆ ಸಂದೇಶ ನೀಡುವಂತಹ ಸದಭಿರುಚಿಯ ಸಿನಿಮಾಗಳು ಬರಲಿ ಎಂದು ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಚಲನ ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಪ್ರಕಾಶ್ ಪಾಂಡೇಶ್ವರ್, ಭೋಜರಾಜ್ ವಾಮಂಜೂರು, ಪ್ರಕಾಶ್ ಶೆಟ್ಟಿ ಸುರತ್ಕಲ್, ಪ್ರೇಮ್ ಶೆಟ್ಟಿ ಸುರತ್ಕಲ್, ಮನೋರಂಜನ್, ಸುದರ್ಶನ್, ವಿನಯ ಕುಮಾರ್, ಯೋಗೀಶ್ ಶೆಟ್ಟಿ ಜಪ್ಪು, ಅನ್ವಿತಾ ಸಾಗರ್, ಸೂರಜ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮೀಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಬಲೇ ಪುದರ್ ದೀಕ ಈ ಪ್ರೀತಿಗ್ ಸಿನಿಮಾವು ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮೂಡುಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‌ನಲ್ಲಿ ನಟರಾಜ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.