- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಳ್ವಾಸ್ ಕಾಲೇಜಿನ ಮಮಲ್, ಲಕ್ಷ್ಮೀಗೆ ಚಿನ್ನದ ಪದಕ

alwas-college [1]ಮೂಡುಬಿದಿರೆ: ಉತ್ತರಕನ್ನಡದ ಹಳಿಯಾಳದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿಗೆ ಎರಡು ಚಿನ್ನ, ಒಂದು ಬೆಳ್ಳಿ, ನಾಲ್ಕು ಕಂಚು ಹಾಗೂ ರಾಷ್ಟ್ರ ಮಟ್ಟದಲ್ಲಿ ಒಂದು ಕಂಚು ಪಡೆದುಕೊಂಡಿದ್ದಾರೆ.

ರಾಜ್ಯಮಟ್ಟದ ಮಮಲ್ 42 ಕೆ.ಜಿ ವಿಭಾಗದಲ್ಲಿ ಪ್ರಥಮ, ಲಕ್ಷ್ಮೀ ರೇಡೆಕರ್ 54 ಕೆ.ಜಿ ವಿಭಾಗದಲ್ಲಿ ಪ್ರಥಮ, 54 ಕೆ.ಜಿ ತೃತೀಯ, ಆತ್ಮಶ್ರೀ 54ಕೆ.ಜಿ ವಿಭಾಗದಲ್ಲಿ ದ್ವಿತೀಯ, ರಾಷ್ಟ್ರಮಟ್ಟದಲ್ಲಿ 54 ಕೆ.ಜಿ ವಿಭಾಗದಲ್ಲಿ ತೃತೀಯ, ಅನುಶ್ರೀ 54 ಕೆ.ಜಿ ತೃತೀಯ, ಮಹಾಲಕ್ಷ್ಮೀ 54 ಕೆ.ಜಿ ವಿಭಾಗದಲ್ಲಿ ತೃತೀಯ ಹಾಗೂ 50 ಕೆ.ಜಿ ವಿಭಾಗದಲ್ಲಿ ಅರ್ಪಣಾ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ಕುಸ್ತಿಪಟುಗಳಿಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಭಿನಂದಿಸಿದ್ದಾರೆ.