- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಫೆ. 24ರಂದು ‘ಲಗೋರಿ’ ಟೆಲಿಫಿಲಂ ಬಿಡುಗಡೆ

lagori [1]ಮಂಗಳೂರು: ಎಸ್ಎಸ್‌ಕೆ ಪ್ರೊಡಕ್ಷನ್ ಲಾಂಛನದಡಿ ಯೂನಿಕ್ಯೂ ಕ್ರಿಯೇಷನ್ಸ್ ಅರ್ಪಿಸುವ ರೋಶನ್ ಎಸ್. ರೈ ಹಾಗೂ ಸಂದೀಪ್ ಶೆಟ್ಟಿ ನಿರ್ಮಾಣದ ‘ಲಗೋರಿ’ ಟೆಲಿಫಿಲಂ ಮಂಗಳೂರಿನ ಸಿನಿಪೊಲೀಸ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದ ನಿರ್ದೇಶಕ ಸಂದೀಪ್ ಶೆಟ್ಟಿ, ಈ ಸಿನಿಮಾದಲ್ಲಿ ಗಳಿಸಿದ ಹಣವನ್ನು ಬಡವರ ಕಲ್ಯಾಣನಿಧಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದರು.

ರಿಝ್ವಾನ್‌ನೊಂದಿಗೆ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ತಾರಾಗಣದಲ್ಲಿ ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ರಾಜೇಶ್, ಸೂರಜ್ ಪಾಂಡೇಶ್ವರ್ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಪ್ರಜ್ವಲ್ ಶೆಟ್ಟಿ, ನಾಯಕಿಯಾಗಿ ಧನ್ಯ ನಟಿಸಿದ್ದಾರೆ. ಉಳಿದಂತೆ ಪ್ರಸಾದ್ ರೈ, ಶ್ರೀಹರಿ, ರಿಝ್ವಾನ್, ಸಂದೀಪ್ ಶೆಟ್ಟಿ, ಸೂರಜ್ ಸನಿಲ್ ಅಭಿನಯಿಸಿದ್ದಾರೆ. ಕಿಶೋರ್ ಕುಮಾರ್ ಶೆಟ್ಟಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಲಗೋರಿ ಸಿನಿಮಾ ಒಟ್ಟು 1ಗಂಟೆ 20 ನಿಮಿಷ ಕಾಲಾವಧಿ ಹೊಂದಿದೆ ಎಂದು ಹೇಳಿದರು.

ಈ ಸಿನಿಮಾ ಫೆ. 25ರಂದು ಡಾನ್‌‌ಬಾಸ್ಕೋ ಹಾಲ್‌‌ನಲ್ಲಿ ನಾಲ್ಕು ಪ್ರದರ್ಶನ ಕಾಣಲಿದೆ. ಯುವ ಬಂಟರ ಸಂಘ ಈ ಸಿನಿಮಾಕ್ಕೆ ವಿಶೇಷ ಒತ್ತು ನೀಡಿ ಪ್ರಚಾರ ನೀಡುತ್ತಿದೆ ಎಂದರು.