- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉದ್ಯೋಗ ಮೇಳ 88 ಮಂದಿ ಉದ್ದಿಮೆದಾರರು, 1,737 ಮಂದಿ ಉದ್ಯೋಗಾಂಕ್ಷಿಗಳು

Job fire [1]

ಮಂಗಳೂರು: ಕೌಶಲ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶನಿವಾರ ಆರಂಭಗೊಂಡ 32ನೇ ಬೃಹತ್‌ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳದ ಮೊದಲ ದಿನ 1,737 ಮಂದಿ ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು.

ಉದ್ಯೋಗ ಮೇಳದಲ್ಲಿ 88 ಮಂದಿ ಉದ್ದಿಮೆದಾರರು ಭಾಗವಹಿಸಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಜೆಒಸಿ, ಐಟಿಐ, ಡಿಪ್ಲೊಮಾ, ಪದವಿ, ಅಂಗವಿಕಲ ಅಭ್ಯರ್ಥಿಗಳಲ್ಲಿ ಒಟ್ಟು 273 ಮಂದಿಯನ್ನು ಸ್ಥಳದಲ್ಲಿಯೇ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, 580 ಮಂದಿಯ ಹೆಸರನ್ನು ಅಂತಿಮ ಸುತ್ತಿಗೆ ಕಾದಿರಿಸಲಾಗಿದೆ. ವಿವಿಧ ಕೌಶಲ ತರಬೇತಿಗೆ 584 ಮಂದಿ ಆಯ್ಕೆಯಾಗಿದ್ದಾರೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಎಚ್‌.ವಿ. ವೆಂಕಟರಾಮು, ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಎ. ವೆಂಕಟೇಶಪ್ಪ, ಸಹಾಯಕ ನಿರ್ದೇಶಕ, ಉದ್ಯೋಗ ಮೇಳ ಸಂಚಾಲಕ ಸಿ. ವಿಶ್ವನಾಥ್‌, ಉದ್ಯೋಗಾಧಿಕಾರಿ ಎಸ್‌.ಜೆ. ಹೇಮಚಂದ್ರ, ಪ್ರಾಚಾರ್ಯ ಎ. ಬಾಲಕೃಷ್ಣ, ಅಧಿಕಾರಿಗಳಾದ ಎಸ್‌.ಡಿ. ಬಸವರಾಜು, ಎಂ.ಎಸ್‌. ಸುದರ್ಶನ್‌, ಅಮರ್‌ನಾಥ್‌ ಅವರು ಉಪಸ್ಥಿತರಿದ್ದರು.