ಅಕ್ರಮ ಮರದ ದಿಮ್ಮಿಗಳು ಪತ್ತೆ

6:27 PM, Thursday, March 8th, 2018
Share
1 Star2 Stars3 Stars4 Stars5 Stars
(No Ratings Yet)
Loading...

marada-dimmiಮಂಗಳೂರು: ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 07 ರಂದು, ಮಂಗಳೂರಿನ ಅರ್ಜುನಕೋಡಿ ರಸ್ತೆಯ ಎಡಪದವು ಎಂಬಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾಗ, ಆ ಪ್ರದೇಶದಲ್ಲಿ ಚಲಿಸುತ್ತಿದ್ದ ಟೆಂಪೋ ನೊಂದಣೆ ಸಂಖ್ಯೆ: ಕೆಎ-20-3819ರಲ್ಲಿ ಹೆಬ್ಬಲಸು ಮತ್ತು ಮಾವು ಜಾತಿಯ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಉಪ ವಲಯ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿ ಅರಣ್ಯ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.

marada-dimmi-2ಹೆಬ್ಬಲಸು ಮತ್ತು ಮಾವು ಜಾತಿಯ ಒಟ್ಟು 13 ದಿಮ್ಮಿಗಳನ್ನು ಹಾಗೂ ಸಾಗಾಟ ಮಾಡಲಾದ ಟೆಂಪೋವನ್ನು ಸರಕಾರಕ್ಕೆ ಅಮಾನತು ಪಡಿಸಿಕೊಳ್ಳಲಾಗಿದೆ.

ಆರೋಪಿಯು ತಲೆಮರೆಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಪ್ರಮೋದ್, ಸೀತಾರಾಮ್ ಕೆ, ಯಶೋಧರ ಕೆ. ರಾಜಶೇಖರ್ ಕ್ಯಾತ್ನಾರ್ ಹಾಗೂ ವಾಹನ ಚಾಲಕ ಜಯ ಪ್ರಕಾಶ್ ಕೆ ಸಹಕರಿಸಿದ್ದಾರೆ. ಎಂದು ವಲಯ ಅರಣ್ಯ ಅಧಿಕಾರಿ ಅರಣ್ಯ ಸಂಚಾರಿ ದಳ, ಮಂಗಳೂರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English