ಮಂಗಳೂರು: ಡಿಜಿಟಲ್ ಸರ್ವಿಸರ್ಸ್ ಪ್ರೊವೈಡರ್ಸ್ ವಿಧಿಸುತ್ತಿರುವ ದರ ಕಡಿತಗೊಳಿಸಲು ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಕರೆ ನೀಡಿದರುವ ರಾಜ್ಯದ ಚಿತ್ರಮಂದಿರಗಳ ಬಂದ್‌ಗೆ ನಗರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ.
ಪ್ರೇಕ್ಷಕರು ಮುಚ್ಚಿದ ಬಾಗಿಲುಗಳ ಚಿತ್ರಮಂದಿರಗಳನ್ನು ನೋಡಿ ಹಿಂದಕ್ಕೆ ಮರಳಿದ್ದಾರೆ. ಈಗಾಗಲೇ ವಿಧಿಸಿರುವ ದರಗಳಲ್ಲಿ ಶೇ. 25ರಷ್ಟು ಕಡಿತ ಮಾಡಲು ಯುಎಫ್ಒ ಮತ್ತು ಕ್ಯೂಬ್‌ಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚ್ಚೇರಿ ಚಲನಚಿತ್ರ ವಾಣಿಜ್ಯ ಮಂಡಳಿಗಳು ಮನವಿ ಸಲ್ಲಿಸಿದ್ದವು.
ಎರಡೆರಡು ಬಾರಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಹೊರತುಪಡಿಸಿ ಉಳಿದ ರಾಜ್ಯಗಳ ಚಲನಚಿತ್ರ ವಾಣಿಜ್ಯ ಮಂಡಳಿಗಳು ಮಾ.2ರಿಂದಲೆ ಚಿತ್ರ ಪ್ರದರ್ಶನ ನಿಲ್ಲಿಸಿದ್ದವು. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದು ಬಂದ್ ಆಚರಿಸಲಾಗುತ್ತಿದೆ.
Click this button or press Ctrl+G to toggle between Kannada and English