- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶನಿವಾರ ಅಸತೋಮ ಸದ್ಗಮಯ ಚಿತ್ರದ ಹಾಡುಗಳ ದ್ವನಿಸುರುಳಿ ಬಿಡುಗಡೆ

AsathomaSadgamaya [1]ಮಂಗಳೂರು : ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿರುವ ಅಸತೋಮ ಸದ್ಗಮಯ ಚಿತ್ರದ ಹಾಡುಗಳ ದ್ವನಿಸುರುಳಿಯು ಇದೇ ಶನಿವಾರ ದಿನಾಂಕ 17-03-18ರಂದು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡೀಯೋದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಹಾಬ್ ಸಲೀಂರವರು ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ವಿಬಿನ್ನವಾಗಿದ್ದು ಮಕ್ಕಳಿಂದ ಹಿಡಿದು ಯುವಕರ ತನಕ, ಮಹಿಳೆಯರಿಂದ ಹಿಡಿದು ಫಿಲಾಸಫಿ ಬಯಸುವವರ ತನಕ ಎಲ್ಲಾ ಕೆಟಗರಿಯವರಿಗೂ ಇಷ್ಟವಾಗುವಂತಹ ಹಾಡುಗಳು ಇದರಲ್ಲಿ ಇವೆ ಎನ್ನುತ್ತಾರೆ ಸಂಗೀತ ನಿರ್ದೇಶಕರು.

ಈ ಚಿತ್ರದಲ್ಲಿರುವ ಒಂದು ಫಿಲಾಸಫಿ ಹಾಡನ್ನ ಖ್ಯಾತ ಗಾಯಕ ವಿಜಯ್ ಪ್ರಕಾಶ್‌ರವರು ಹಾಡಿದ್ದು ಈಗಿನ ಟ್ರೆಂಡಿಗೆ ಅನುಗುಣವಾಗಿ ಹಾಡು ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ಅವರು. ಜೊತೆಗೆ ಅನುರಾದ ಭಟ್ ಅವರು ಈ ಚಿತ್ರದಲ್ಲಿ ಅಮ್ಮನಿಗೋಸ್ಕರ ಇರುವ ಒಂದು ಹಾಡನ್ನು ಹಾಡಿದ್ದಾರೆ. ಇವರೇ ಹಾಡಿರುವ ಅಪ್ಪ ಐ ಲವ್ ಯೂ ಹಾಡು ಈ ಹಿಂದೆ ಸೂಪರ್ ಹಿಟ್ ಆಗಿದ್ದನ್ನ ಇಲ್ಲಿ ಸ್ಮರಿಸಬಹುದು.
ರೊಮ್ಯಾಂಟಿಕ್ ಸಾಂಗ್ ಇಷ್ಟ ಪಡುವವರಿಗಾಗಿ ಡ್ಯುಯೆಟ್ ಸಾಂಗ್ ಜೊತೆಗೆ ಮಕ್ಕಳಿಗಾಗಿಯೇ ಒಂದು ಹಾಡು ಈ ಚಿತ್ರದಲ್ಲಿದೆಯಂತೆ.

ಈ ಚಿತ್ರದ ಟ್ರೈಲರ್ ಇದೇ ತಿಂಗಳ 23ರಂದು ದುಬೈನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೊಳ್ಳಲಿದೆ. ದುಬೈನ ಫಾರ್ಚೂನ್ ಫ್ಲಾಜಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದುಬೈನ ಗಣ್ಯರಿಂದ ಈ ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇದೊಂದು ಸಾಂಸಾರಿಕ ಚಿತ್ರವಾಗಿದ್ದು ಪ್ರತ್ಯೇಕವಾಗಿ ಪ್ರತಿಯೊಂದು ಮಕ್ಕಳು ಮತ್ತು ಮಕ್ಕಳ ಹೆತ್ತವರು ತಪ್ಪದೇ ನೋಡಲೇಬೇಕಾದ ಸಿನೆಮಾವಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ರಾಜೇಶ್ ವೇಣೂರ್‌ರವರು.

ಈ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್‌ರವರು ಪ್ರದಾನ ಭೂಮಿಕೆಯಲ್ಲಿದ್ದು, ಇವರ ಜೊತೆಗೆ ಕಿರಣ್ ರಾಜ್ ಹೀರೋ ಆಗಿ ನಟಿಸಿದ್ದಾರೆ. ಜೊತೆಗೆ ಬಿಗ್‌ಬಾಸ್ ಖ್ಯಾತಿಯ ಲಾಸ್ಯ ನಾಗರಾಜ್ ಹಾಗು ಡ್ರಾಮಾ ಜೂನಿಯರ‍್ಸ್ ಖ್ಯಾತಿಯ ಬೇಬಿ ಚಿತ್ರಾಲಿಯವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎಪ್ರಿಲ್ ತಿಂಗಳಾಂತ್ಯಕ್ಕೆ ತೆರೆಗೆ ತರುವ ಯೋಚನೆ ಇದೆ ಎನ್ನುತ್ತಾರೆ ನಿರ್ದೇಶಕರು.