- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಯಕ್ಷಧ್ರುವ ಪಟ್ಲ ಸಂಭ್ರಮ 2018 ಕಾರ್ಯಕ್ರಮದ ತೃತೀಯ ವರ್ಷದ ವಾರ್ಷಿಕೋತ್ಸವ

sathish-patla [1]ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ 3ನೇ ವರ್ಷದ ವಾರ್ಷಿಕೋತ್ಸವ ’ಯಕ್ಷಧ್ರುವ ಪಟ್ಲ ಸಂಭ್ರಮ’ 2018 ಕಾರ್ಯಕ್ರಮ ಮೇ 27ರಂದು ಭಾನುವಾರ ಅಡ್ಯಾರ್‌ಗಾರ್ಡ್‌ನಲ್ಲಿ ಜರಗಲಿದ್ದು ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅಡ್ಯಾರ್‌ಗಾರ್ಡ್‌ನಲ್ಲಿ ಜರಗಿತು.
ಸಭೆಯಲ್ಲಿ ‘ಪಟ್ಲ ಸಂಭ್ರಮ’ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ಮಾಹಿತಿಯನ್ನು ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸಭೆಗೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಈವರೆಗೆ ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ಮೊತ್ತದ ಸೇವಾ ಯೋಜನೆಗಳನ್ನು ಅಶಕ್ತ ಕಲಾವಿದರಿಗೆ ನೀಡಲಾಗಿದೆ ಎಂದವರು ತಿಳಿಸಿದರು.

ಈವರೆಗೆ ೨೯ ಘಟಕಗಳ ರಚನೆಯಾಗಿದ್ದು, ಈ ಬಾರಿ ಎಲ್ಲಾ ಘಟಕಗಳಿಗೂ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ನಾಯಕತ್ವದ ಗುಣ ಎಲ್ಲರಲ್ಲೂ ಇರುವುದಿಲ. ಪಟ್ಲರಲ್ಲಿ ನಾಯಕತ್ವದ ಗುಣ ಇದೆ. ಹೀಗಾಗಿ ಒಬ್ಬ ವ್ಯಕ್ತಿ ಕೇಂದ್ರೀಕೃತನಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರ ಬಗ್ಗೆ ಕಾಳಜಿ ವಹಿಸಿ ಅವರು ಪಾರದರ್ಶಕವಾಗಿ ಕಲಾಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಖ್ಯಾತ ಕಲಾವಿದ ಜಬ್ಬಾರ್ ಸಮೋ ತಿಳಿಸಿದರು.

ಸಭೆಯಲ್ಲಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಸೀತಾರಾಮ ರೈ ಸವಣೂರು, ಭುಜಬಲಿ, ಪಿ.ಆರ್.ಶೆಟ್ಟಿ ಉಪ್ಪಲ, ನಿಟ್ಟೆಗುತ್ತು ರವಿರಾಜಶೆಟ್ಟಿ, ಚಿಕ್ಕಪ್ಪ ನಾಕ್, ದಿನೇಶ್ ಶೆಟ್ಟಿ ದುಬಾಯಿ, ಪದ್ಮನಾಭ ಗೌಡ, ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷರಾದ ಡಾ. ಮನುರಾವ್, ಜತೆ ಕಾರ್ಯದರ್ಶಿಗಳಾದ ಉದಯ ಕುಮಾರ್ ಶೆಟ್ಟಿ ಕುಂದಾಪುರ, ರಾಜೀವ ಪೂಜಾರಿ ಕೈಕಂಬ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಆರತಿ ಆಳ್ವ , ಲೀಲಾಕ್ಷ ಕರ್ಕೇರ, ಅಶೋಕ್ ಮಜಿಲ, ದಿವಾಕರ ನಾಕ್ ಉಪಸ್ಥಿತರಿದ್ದರು.

ಫೌಂಡೇಶನ್ ಟ್ರಸ್ಟ್ ಮತ್ತು ಆಯಾ ಘಟಕದವರು ಈವರೆಗೆ ಮಾಡಿಕೊಂಡು ಬಂದಿರುವ ಕಾರ್ಯಕ್ರಮಗಳ ಪ್ರಮುಖ ಅಂಶಗಳ ಸಾಕ್ಷ್ಯ ಚಿತ್ರದ ತುಣುಕುಗಳನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು.

ಟ್ರಸ್ಟ್‌ನ ಕಾರ್ಯವೈಖರಿಯನ್ನು ಮೆಚ್ಚಿ ಯತೀಶ್ ರೈ ಫೌಂಡೇಶನ್‌ಗೆ ಒಂದು ಲಕ್ಷ ರೂ ನೀಡಿ ಟ್ರಸ್ಟಿಯಾದರು ಪಟ್ಲ ಸತೀಶ್ ಶೆಟ್ಟಿಯವರ ಪುತ್ರಿ ರಿತ್ವಿಕಾ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದಳು.

ಮೇ. ೨೭ರಂದು ಅಡ್ಯಾರ್ ಗಾರ್ಡ್‌ನಲ್ಲಿ ಜರಗುವ ಪಟ್ಲ ಸಂಭಮದಲ್ಲಿ ನಡೆಯುವ ಯಕ್ಷಗಾನ ಹಾಸ್ಯ ವೈಭವದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಬಂಟ್ವಾಳ ಜಯರಾಮ ಆಚಾರ್ಯ ಭಾಗವತಿಕೆ ಮಾಡಲಿದ್ದಾರೆ. ಕುಸೇಲ್ದರಸೆ ನವೀನ್ ಡಿ ಪಡೀಲ್. ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಮೊದಲಾದವರು ಸೀತಾರಾಮ ಕುಮಾರ್, ಹಳ್ಳಾಡಿ, ಕಡಬ, ಕೊಡಪದವುರೊಂದಿಗೆ ಹಾಸ್ಯ ಪಾತ್ರದಲ್ಲಿ ಮಿಂಚಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಋಷಬ್ ಶೆಟ್ಟಿ, ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮೊದಲಾದವರು ಭಾಗವಹಿಲಿದ್ದಾರೆ.