‘ಪರಿಸರದಲ್ಲಿ ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಮಹತ್ವ ನೀಡಿ ‘-ಎಸ್.ರಾಘವೇಂದ್ರ 

12:45 AM, Saturday, March 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Kordabbuಮಂಗಳೂರು : ಯುವಕ ಮಂಡಲಗಳು  ಕೇವಲ ಮನೋರಂಜನಾ ಕಾರ್ಯಕ್ರಮಗಳ ಸಂಘಟನೆಗೆ ಮಾತ್ರ ಸೀಮಿತವಾಗಿರ ಬಾರದು.  ಪರಿಸರದಲ್ಲಿ  ಸಾಮಾಜಿಕ ಕಾರ್ಯಗಳಿಗೆ ಕೂಡ ಹೆಚ್ಚು ಮಹತ್ವವನ್ನು ನೀಡಿ ಜನಪ್ರಿಯತೆಯನ್ನು ಗಳಿಸಬೇಕೆಂದು  ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಗುರಿಕಾರರಾದ ಶ್ರೀ ಎಸ್ ರಾಘವೇಂದ್ರ ಅವರು  ಹೇಳಿದ್ದಾರೆ.

ಅವರು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ರಂಗ ವೇದಿಕೆಯಲ್ಲಿ ವಿಜಯ್ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ ‘ ಗಾನ ನೃತ್ಯ ವೈಭವ ‘ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಅಪ್ಪಿ ಎಸ್. ಅವರು ವಹಿಸಿದ್ದರು.  ದೇವಸ್ಥಾನದ ಗೌರವ ಸಲಹೆಗಾರರಾದ ಶ್ರೀ ಕೆ. ಪಾಂಡುರಂಗ,ಕ್ರೀಡಾ ಅಂಕಣಕಾರರಾದ ಶ್ರೀ ಎಸ್.ಜಗದೀಶ್ಚಂದ್ರ ಅಂಚನ್, ನಿವೃತ್ತ ಪ್ರಾಂಶುಪಾಲ (ಐಟಿಐ)ರಾದ ಶ್ರೀ ಎಸ್.ಸದಾನಂದ , ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಸೇಸು ಎರ್ಮಾಳ್ , ಶ್ರೀ ವಿಲ್ಪ್ರೇಡ್ , ವಿಜಯ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಶ್ರೀ ಬಾಲಕೃಷ್ಣ ಜೋಗಿ  ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಮ್ಮಾನ : ಈ ಸಂದರ್ಭದಲ್ಲಿ ನೃತ್ಯ ಗುರು ಶ್ರೀ ಸುರೇಶ್ ಅತ್ತಾವರ ಅವರನ್ನು ಸಮ್ಮಾನಿಸಲಾಯಿತು.

ಶ್ರೀಮತಿ ರೇವತಿ ಲಕ್ಷ್ಮಣ್ ಸ್ವಾಗತಿಸಿದರು. ಶ್ರೀ ಶುಭೋದಯ ವಂದಿಸಿದರು. ಕಾರ್ಯಕ್ರಮವನ್ನು ಜಾನಪದ ವಿದ್ವಾಂಸರಾದ ಶ್ರೀ ಕೆ. ಕೆ.ಪೇಜಾವರ್ ಇವರು ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English