- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಹುಲ್ ಗಾಂಧಿ ಮುಂದೆ ಕಣ್ಣೀರು ಹಾಕಿದ ಜನಾರ್ದನ ಪೂಜಾರಿ

janardhana-poojary [1]ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಸಂಜೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದಿಂದ ವಾಪಾಸಾಗುವಾಗ ರಾಹುಲ್ ಗಾಂಧಿಯ ಮುಂದೆಯೇ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ನೀವೇ ಊಹಿಸಿ ಪ್ರವಾಸದ ಭಾಗವಾಗಿ ರಾಹುಲ್ ಗಾಂಧಿ ಸಂಜೆ ನೆಹರೂ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಂತರ ರೊಸಾರಿಯೋ ಚರ್ಚ್ ಗೆ ಭೇಟಿ ನೀಡಿದ ಅವರು ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ತೆರಳಿದರು.

ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಆಗಮಿಸಿದ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜನಾರ್ದನ ಪೂಜಾರಿ ಅವರಲ್ಲಿ ರಾಹುಲ್ ಗಾಂಧಿ ಆರೋಗ್ಯ ವಿಚಾರಿಸಿದರು. ಸಿಎಂ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನಿತರ ಮುಖಂಡರು ರಾಹುಲ್ ಗಾಂಧಿ ಜತೆ ದೇವಾಲಯಕ್ಕೆ ತರಳಿದರು.ರಾಹುಲ್ ಗಾಂಧಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಕುತೂಹಲ ಹುಟ್ಟಿಕೊಂಡಿತ್ತು.

ಆದರೆ ಜನಾರ್ದನ ಪೂಜಾರಿ ಜೊತೆಗಿನ ದ್ವೇಷ ಬಿಟ್ಟು ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಾಲಯದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ದೇವರ ದರ್ಶನ ಪಡೆದರು. ಹಲವು ಬಾರಿ ಮಂಗಳೂರಿಗೆ ಬಂದಿದ್ದರೂ ಕ್ಷೇತ್ರಕ್ಕೆ ಬಾರದೆ ಪೂಜಾರಿ ಅವರೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ಸಿಎಂ ರಾಹುಲ್ ಗಾಂಧಿ ಮುಂದೆ ದ್ವೇಷ ಮರೆಮಾಚಲು ಯತ್ನಿಸಿದರು. ಆದರೆ ಜನಾರ್ದನ ಪೂಜಾರಿ ಜೊತೆ ಸಿಎಂ ಸಿದ್ಧರಾಮಯ್ಯ ಹೆಚ್ಚು ಮಾತನಾಡದಿರುವುದು ಗಮನ ಸೆಳೆಯಿತು. ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯವರನ್ನು ಸನ್ಮಾನಿಸಲಾಯಿತು.

ದೇವಾಲಯದಿಂದ ರಾಹುಲ್ ಗಾಂಧಿ ಹಿಂದಿರುಗುವಾಗ ರಾಹುಲ್ ಗಾಂಧಿ ಎದುರು ಜನಾರ್ದನ ಪೂಜಾರಿ ಕಣ್ಣೀರು ಹಾಕಿದರು. ರಾಹುಲ್ ಕೆನ್ನೆ ಸವರಿ ಕಣ್ಣೀರಿಟ್ಟು ಗದ್ಗರಿತರಾದ ಪೂಜಾರಿ ಅವರನ್ನು ರಾಹುಲ್ ಗಾಂಧಿ ಸಂತೈಸಿದರು. ಜನಾರ್ದನ ಪೂಜಾರಿಯನ್ನು ತಬ್ಬಿಕೊಂಡು ರಾಹುಲ್ ಗಾಂಧಿ ಸಮಾಧಾನ ಪಡಿಸಿದರು.