ಆಳ್ವಾಸ್ ಎನ್‍ಎಸ್‍ಎಸ್ ಶೈಕ್ಷಣಿಕ ವರ್ಷದ ಚಟುವಟಿಕಗಳ ಸಮಾರೋಪ ಸಮಾರಂಭ

5:14 PM, Monday, April 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

NSS-Programಮೂಡಬಿದಿರೆ: ಆಳ್ವಾಸ್ ಕಾಲೇಜಿನ ಎನ್ ಎಸ್ ಎಸ್ ವಿಭಾಗದ 2017-18 ಶೈಕ್ಷಣಿಕ ವರ್ಷದ ಚಟುವಟಿಕಗಳ ಸಮಾರೋಪ ಸಮಾರಂಭ ಶನಿವಾರ ಕಾಲೇಜಿನ ಪಿ.ಜಿ ಸೆಮಿನಾರ್ ಹಾಲ್ ನಲ್ಲಿ ಜರುಗಿತು.

ಮೂಡಬಿದಿರೆ ರೋಟರಿ ಕ್ಲಬ್‍ನ ಅಧ್ಯಕ್ಷ ಶ್ರೀಕಾಂತ ಕಾಮತ್, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಸದಾ ಸ್ವಚ್ಛತಾ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ, ಸುಂದರ ಪರಿಸರದ ನಿರ್ಮಾತೃಗಳಾಗಬೇಕು ಮೂಡಬಿದಿರೆ ರೋಟರಿ ಕ್ಲಬ್‍ನ ಮಹತ್ತರ ಯೋಜನೆಯಲ್ಲೊಂದಾದ ಸ್ವಚ್ಛ ಸುಂದರ ಮೂಡಬಿದಿರೆ ನಿರ್ಮಾಣದಲ್ಲಿ ಮುಂದಿನ ದಿನಗಳಲ್ಲಿ ಆಳ್ವಾಸ್ ಕಾಲೇಜಿನ ಎನ್‍ಎಸ್‍ಎಸ್ ವಿಭಾಗವು ಕೈಜೋಡಿಸಬೇಕು ಎಂದು ವಿನಂತಿಸಿದರು. ಕಾಲೇಜಿನ ಎನ್‍ಎಸ್‍ಎಸ್ ಘಟಕಕ್ಕೆ ಐದುಸಾವಿರ ರೂಪಾಯಿಯ ಧನ ಸಹಾಯ ನೀಡಿ, ಸಲಕರಣೆಗಳನ್ನು ಖರೀದಿಸಲು ಸಹಕರಿಸುವುದಾಗಿ ತಿಳಿಸಿದರು.

NSS-Program-2ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಎನ್‍ಎಸ್‍ಎಸ್ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಂಘಟನೆಯಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳಲ್ಲಿ ಸಮಾಜದೆಡೆಗಿನ ದೃಷ್ಠಿಕೋನ ಬದಲಾಗುವುದರೊಂದಿಗೆ, ಸಮಾಜಕ್ಕೆ ಬೇಕಾಗುವ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನೆರವೇರುತ್ತವೆ.ಯುವ ಜನತೆ ಸದೃಡ ಸಮಾಜ ನಿರ್ಮಾಣದಲ್ಲಿ ತೊಡಗಿಕೊಂಡಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ನೀರಿನ ಸಂರಕ್ಷಣೆಗಾಗಿ ದೀರ್ಘಕಾಲದ ಯೋಜನೆ ಮತ್ತು ಯೋಚನೆಗಳನ್ನು ಹಾಕಿಕೊಳ್ಳಬೇಕು.

NSS-Program-3ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ವಹಿಸಿದ್ದರು.

ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಗುರುದೇವ್ ಪ್ರಸ್ತಾವಿಕವಾಗಿ ಮಾತನಾಡಿರು. ಎನ್‍ಎಸ್‍ಎಸ್‍ನ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸಂಧರ್ಭದಲ್ಲಿ ಬೀಳ್ಕೊಡಿಗೆ ನೀಡಲಾಯಿತು. ವಿವಿಧ ವಿನೋದಾವಳಿಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

NSS-Program-4ಎನ್‍ಎಸ್‍ಎಸ್ ಅಧಿಕಾರಿ ಧನಂಜಯ ಆಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ಷಮಾ ಕಾರ್ಯಕ್ರಮ ನಿರೂಪಿಸಿದರು. ರುಚಿತಾ ವಂದಿಸಿದರು. ವಿದ್ಯಾರ್ಥಿಗಳಾದ ರಮ್ಯಾ ಕಾಮತ್, ಮುಕೇಶ್, ಶಿವಪ್ರಸಾದ್, ವರ್ಷಿತಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English