ಮಂಗಳೂರು: ಶ್ರೀಮಂತ ವ್ಯಕ್ತಿಗಳನ್ನು ಗುರುತಿಸಿ ದರೋಡೆಗೆ ಯತ್ನಿಸುತ್ತಿದ್ದ ಬಿಹಾರ ಮೂಲದ ಐವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಡಿಸಿಐಬಿ ಪೊಲೀಸರು ಪುತ್ತೂರು ತಾಲೂಕಿನ ಕೊಲ್ಲಾಜೆಯಲ್ಲಿ ಬಂಧಿಸಿದ್ದಾರೆ.
ಬಿಹಾರ ಮೂಲದ ಪ್ರಮೋದ್ ಶರ್ಮ, ಅಂಕುಶ್ ರಾಜ್, ಟುನ್ ಟುನ್ ಕುಮಾರ್, ಕರಣ್ ಕುಮಾರ್, ಪ್ರಿನ್ಸ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರಿಂದ ಚೂರಿ, ಕಬ್ಬಿಣದ ರಾಡ್, ಉಳಿ, ಸುತ್ತಿಗೆ, ಮೆಣಸಿನ ಹುಡಿ ಪ್ಯಾಕೇಟ್, ಹ್ಯಾಂಡ್ ಗ್ಲೌಸ್, ಪ್ಲಾಸ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
Click this button or press Ctrl+G to toggle between Kannada and English