- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

‘ಶಬರಿ’ ಕನ್ನಡ ನಾಟಕ ಸಾಹಿತ್ಯ ಪುಸಕ್ತ ಬಿಡುಗಡೆ

palimar-matt [1]ಉಡುಪಿ: ಉಡುಪಿ ಶ್ರೀಕೃಷ್ಣ ಮಠ ಹಾಗೂ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಲೇಖಕ ಡಾ.ಭಾಸ್ಕರಾನಂದ ಕುಮಾರ್ ಅವರ ಶಬರಿ ಕನ್ನಡ ನಾಟಕ ಸಾಹಿತ್ಯ ಪುಸಕ್ತ ಬಿಡುಗಡೆ ಸಮಾರಂಭವು ಶುಕ್ರವಾರ ರಾಜಾಂಗಣದಲ್ಲಿ ಜರಗಿತು.

ಕೃತಿಯನ್ನು ಬಿಡುಗಡೆಗೊಳಿಸಿದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಶಬರಿ ಕಥೆಯನ್ನು ಆರಿಸಿಕೊಂಡು ಕೃತಿ ರಚಿಸಿರುವ ಪರಿ ಉತ್ತಮವಾಗಿದೆ. ದೃಶ್ಯ ಮಾಧ್ಯಮಕ್ಕೆ ಅಳವಡಿಸಲು ಇದು ಸೂಕ್ತವಾಗಿದೆ. ಒಬ್ಬ ಸೂತ್ರಧಾರರನ್ನು ಬಳಸಿಕೊಂಡು ಹೆಣೆಯಲ್ಪಡುವ ನಾಟಕ ಸನ್ನಿವೇಶಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂದು ಹೇಳಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್.ಸಾಮಗ ಮಾತನಾಡಿ, ಶಬರಿ ವ್ಯಕ್ತಿತ್ವವನ್ನು ತಮ್ಮದೇ ಆದ ಕಲ್ಪನೆ ಯಲ್ಲಿ ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಒಬ್ಬ ಸೂತ್ರಧಾರರನ್ನು ಬಳಸಿಕೊಂಡು ಇಡೀ ನಾಟಕವನ್ನು ರಚಿಸುವ ಮೂಲಕ ಓದುಗರಲ್ಲಿ ಹೊಸ ಲೋಕ ಸೃಷ್ಟಿಸು ವಲ್ಲಿ ಲೇಖಕ ಯಶ್ವಸಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಲೇಖಕ ಡಾ.ಭಾಸ್ಕರಾನಂದ ಕುಮಾರ್, ಎ.ಸಿ.ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.